Pages

Sunday, February 10, 2013


ರಾಮಾಯಣ..


ಅದೆಷ್ಟೋ ಸಂಗತಿಗಳು ಬದಲಾಗಲ್ಲ ಅಂದ್ಕೊಂಡಿರ್ತೀವಿ .... ಆದರೆ... ನೋಡನೋಡುತ್ತಿದ್ದಂತೆ... ಅರೆ!!... ಅವು ಹೀಗಿದ್ದವಾ?!!.. ಅನ್ನೋವಷ್ಟರಮಟ್ಟಿಗೆ...ಉಹುಂ....ಎಷ್ಟು ತಲೆ 
ಕೆರೆದುಕೊಂಡರೂ,.... ತಲೆಯಲ್ಲಿರೋ ಕೂದಲು ಉದುರಿದವೇ ವಿನಃ,
 ಸಮಾಧಾನ ಕೊಡುವಂತಹ ಉತ್ತರ ಸಿಗೋದೆ  ಇಲ್ಲ..

ಒಂದು ಕಡೆ ತೀರ  ಆಪ್ತವಾಗಿದ್ದ ಸಂಬಂಧಗಳು ಸಮಯದ, ಮತ್ತು ಭೌಗೋಲಿಕ ಪರಿಧಿಯಡಿ ಸಿಲುಕಿ ನಲುಗಿ ಹೊಕ್ತಾವೆ/ಹೋಗಿದಾವೆ.... ಇನ್ನೊಂದು  ಕಡೆ   ಎಲ್ಲ ಪರಿಧಿಗಳನ್ನ ಮೀರಿ ನಿಲ್ಲುವಂತಹವನ್ನ  ನೋಡ್ತಾ ಇದ್ರೆ...  
ಎಲ್ಲವೂ ಹೀಗೆ ಇರಬಾರದೇ ಅಂತ ಅನ್ನಿಸತ್ತೆ.. ಆದರೆ..
 ಜಗತ್ತು ಇರೋದೇ ಹೀಗೆ....

ಎಲ್ಲವೂ ನಮಗೆ ಬೇಕಾದ ಹಾಗೆ ಇರೋಕೆ ಸಾಧ್ಯ ಇಲ್ವಲ್ಲ!!...
ಪ್ರತಿ ಹಂತದಲ್ಲೂ ಶುರುವಿನಲ್ಲಿ  ಒಂದಿಷ್ಟು ಸಂತೋಷ..
 ಕೊನೆಯಲ್ಲಿ.. ಅಗಲಿಕೆಯ ದುಃಖ..

ಬೇಜಾರೇನಪ್ಪಾ  ಅಂದ್ರೆ... 
ಮತ್ತೆ ಹೊಸತಾಗಿ ಅದೇ-- start from the scratch  ಅಂತಾರಲ್ಲ..
 ಅಲ್ಲಿಂದ ಶುರು ಮಾಡಬೇಕಲ್ಲ ಅನ್ನೋದು!!.. ಅದೂ...
 ಮುಂದೊಂದಿನ ಮತ್ತೆ ದುಃಖಕ್ಕೆ ಕಾರಣವಾಗಬಹುದು...  ಅಂತ ಗೊತ್ತಿದ್ದೂ.... ಇದೊಂದ್ರೀತಿ... ಹುಟ್ತೊವ್ರೆಲ್ಲ ಸಾಯಲೇಬೇಕು ಅಂದಂತೆ... 
ಆದರೂ...ಜನ ಹುಟ್ಟುತ್ತಲೇ ಇರಬೇಕು.. 
ಇನ್ನೊಂದು ಕಡೆ ಸಾಯ್ತಾ ಇರ್ಬೇಕು...ಅನ್ನೋ ಜಗದ ನಿಯಮ...
ಇದೆಲ್ಲದರ ಮಧ್ಯೆ ಬದುಕಿರುವ ಬಡ ಜೀವಕ್ಕೆ ಊರುಗೊಲಾಗಬಹುದು.... 
ಅಂತ ಇದ್ರೆ .. ಅದು... ಜೀವನ ಪ್ರೀತಿ ಮಾತ್ರ.......


                                                               -- \/эйждт

Friday, August 17, 2012

ಅಂದು.. ಅವಳ ಕಂಡು..
"ಕಣ್ತುಂಬ ತುಂಬಿರಲು ಚೆಲುವೆ ನಿನ್ನಯ ಚೆಲುವು..
ನಿದ್ರೆಯೀಗ ಬರೀ ಕನಸು, ಕನಸುಗಳೆಲ್ಲ ನಿನ್ನವು"..
ಎಂದು ಹೊರಟ ಸಾಲುಗಳು..
ಅವಳ ತಲುಪುವ ಮುನ್ನವೇ..
ಕರಗಿ  ಹೋದವಲ್ಲ..
ಹೆಪ್ಪುಗಟ್ಟಿದ ಮೋಡ ಗಾಳಿಗೆ ಸಿಲುಕಿದಂತೆ..

ಹಾಡು ಹಾಳಾಗಲಿ.. ಎಂದೆದ್ದು ಹೊರಟರೆ..
ಕಾಡುತ್ತ  ಕೂತಿತೆ ಆ ಮುದ್ದು ಮೊಗ ..
ಖಿನ್ನವಾಯಿತು ಮನಸು.. 
ನಿದ್ರೆಯಿಲ್ಲ, ನಿದ್ರೆಯೆಲ್ಲ ಚೂರು ಚೂರು ಕನಸುಗಳೇ..


ಆಮೇಲೆ.. 

ಭಗೀರಥನ ನೆನಪಾಗಿ..
ಚೂರಾದ ಕನಸುಗಳ ಕೂಡುತ್ತ ಕೂತೆ..
ಏನಾಶ್ಚರ್ಯ!!.. ಕೂಡಿಸಿದ ಕನಸುಗಳಲ್ಲಿ...
ಮೂಡಿದ್ದು ಚೆಂದದ ಬೇರೊಂದು ಮುಖ..!!

ಹಳೆಯ ಹುಣ್ಣ ಕೆರೆಯುತ್ತ..
ಹೊಸ ಹಾಡು ಹುಟ್ಟಿದ್ದು ಹೀಗೇನೆ.. 


--\/эйждт


Thursday, June 14, 2012

BMS ಬಾಂಧವರಿಗೆ ...


ಇವತ್ತು ಬೆಳಗ್ಗೆಯಿಂದ ತೀರ ಖಾಲಿ ಖಾಲಿ ಅನ್ನಿಸ್ತಾ  ಇತ್ತು.. ಸಾಯಂಕಾಲದ 
ಹೊತ್ತಿಗೆ  ಬ್ಯೂಗಲ್ ರಾಕ್ ಗಾದರೂ  ಹೋಗಿ ಬರೋಣ ಅಂತ ಎದ್ರೆ.. sudden ಆಗಿ ಭಾರ ಅನ್ನಿಸಿ ಬಿಡೋದೇ!!...

ಮರೆತೇ  ಹೋಗಿತ್ತು ನೋಡಿ..   ನಿನ್ನೆಯಷ್ಟೇ  ನೆನಪಿನ ಚೀಲದ ತುಂಬ BMSನಲ್ಲಿನ ಕ್ಷಣಗಳನ್ನ  ಗಿಡಿದು ತುಂಬಿಸಿಕೊಂಡಿದೀನಿ ... 

ಎಷ್ಟೊಂದು  ಸವಿ ನೆನಪುಗಳು!!..

.... ಹೌದು .. ನಾಲ್ಕು ವರ್ಷಗಳು ಅದ್ಹೇಗೆ ಕಳೆದು ಹೋದವೋ ಗೊತ್ತಿಲ್ಲ್ಲ.. ಮೊನ್ನೆಯಷ್ಟೇ ಯಾರಾದರೂ ragging  ಮಾಡಬಹುದಾ ಅನ್ನುವ ಪುಕ್ಕಲುತನದೊಂದಿಗೆ ಕಾಲೇಜ್ ಒಳಗೆ ಕಾಲಿಟ್ಟಿದ್ದು ಕಣ್ಣಿಗೆ ಕಟ್ಟಿದಂತಿದೆ.. ಅಷ್ಟರಲ್ಲ್ಲೇ.... 
ನಿನ್ನೆಯ ದಿನ...
ನಮ್ಮನ್ನ್ನ ಕಾಲೇಜ್  ನಿಂದ  official ಆಗಿ ಹೊರದಬ್ಬಿ ಬಿಟ್ಟರಲ್ಲ!!(farewell ) ....

 ಜಗತ್ತು ಓಡ್ತಾ  ಇದೆ ಅನ್ನೋದು ಇದಕ್ಕೇನಾ?? 

ಅದೆಷ್ಟೊಂದು  ನೆನಪುಗಳು..!! 
C  ಬೆಂಚು, ಬೋರ್ ಹೊಡೆಸೋ   ಕ್ಲಾಸ್ ರೂಮ್  ಪಾಠಗಳು .. 
ಲೈಬ್ರರಿ ಸ್ಟೆಪ್ಸು, ಅಲ್ಲಿ ಕುತ್ಗೊಂಡು ಮಾಡಿದ teasing , gossip... ಕಚ್ಚಾಡಿ ತಿಂದ ತಿಂಡಿಗಳು ನಮ್ಮ್ನನ್ನ ಮಿಸ್  ಮಾಡಿಕೊಳ್ಳುತ್ತವೋ  ಇಲ್ಲವೋ ಗೊತ್ತಿಲ್ಲ..
 ಆದರೆ...
ನಮ್ಮಿಂದ ಇವುಗಳನ್ನ   ಮಿಸ್ ಮಾಡಿಕೊಳ್ಳದೇ  ಇರಲು ಸಾಧ್ಯವಾ ??..


ಅದರೂ ಪಯಣ ಮುಂದೆ ಸಾಗಬೇಕಲ್ಲ ...

ನಾಲ್ಕು ವರ್ಷಗಳಲ್ಲಿ ನಮ್ಮಗಳ ಹಾದಿ bms ಸುತ್ತಮುತ್ತಾನೆ ಹರಿದಾಡಿದ್ದವು.. ಮುಂದೆ ಹಾದಿ ಒಂದೇ ಅಗಿರೋದಕ್ಕೆ   ಗದೇ ಇದ್ರೂ  ಅವಾಗವಾಗ ಸಂಧಿಸ್ತಾ ಇರಲಿ ಅನ್ನುವ ಆಶಯದೊಂದಿಗೆ ...

ಸ್ನೇಹವೆಂಬ  ಮಮತೆಗೊಂದು  ಸಲಾಂ!!..



   --\/эйждт

Sunday, April 15, 2012


ನಮ್ಮ   ದೃಷ್ಟಿಯ   ಮೇಲೆ   ದೃಶ್ಯ   ನಿರ್ಧಾರವಾಗತ್ತೆ  .. ನಿನ್ನೆ     ಹಾಸ್ಯ   ಕಾರ್ಯಕ್ರಮವೊಂದನ್ನ   ವೀಕ್ಷಿಸುತ್ತಾ   ಇದ್ದೆ .. ಆದ್ರೆ..,  ಅಲ್ಲಿ  ನನಗೆ  ಕಾಣ್ತಾ  ಇದ್ದಿದ್ದು ….


ಸನ್ಮಿತ್ರ   ನಗೆಯಭಿಮಾನಿ,
"ನನಗೆ  ಇತ್ತೀಚೆಗೆ  ಈ   ಕಾರ್ಯಕ್ರಮಗಳನ್ನ  ಮಾಡೋದು  ತುಂಬಾ  ಬೋರಾಗ್ತಾ    ಇದೆ .. ನನ್ನಲ್ಲಿ  ಇನ್ನು  ಹೊಸ  joke ಗಳನ್ನ  ಸೃಷ್ಟಿಸುವುದು  ಸಾಧ್ಯವಿಲ್ಲ  ”.. ಅಂತ  ಪರಿಚಯದವರ  ಹತ್ತಿರ  ಹೇಳ್ದೆ .. ಅವ್ರು  – “ನೀವ್ಬಿಡೀಪ್ಪ   .. ತುಂಬಾ  joke ಮಾಡ್ತೀರ  ..” ಅಂದು  ಬಿಡೋದೇ !!.. ಜನ   ನನ್ನನ್ನ   serious ಆಗೇ  ತಗೋಳಲ್ಲ  !!.. L

ಇನ್ನೊಂದಿನ  ನನ್ನ   ಕಾರ್ಯಕ್ರಮ    ನಡೀತಾ  ಇರೋವಾಗ .. “ಅವತ್ತೂ    ಇದೇ  joke ಮಾಡಿದ್ದಾ   ಕಣೆ!!”..  ಅಂತ   ಮಹಿಳಾ  ಮಣಿಯೊಬ್ಬಳು    ತನ್ನ   ಸೆರಗನ್ನ   ಸರಿ  ಮಾಡ್ಕೊಳ್ತಾ     ಪಿಸುಗುಟ್ಟಿದಳು  .. ಎಷ್ಟು   ಪಿಚ್ಚೆನ್ನಿಸ್ತು     ಗೊತ್ತಾ .. L

ಏನೋ  ನನ್ನ  ಮೇಲೆ  ನಾನೇ  joke ಮಾಡ್ಕೊಳೋದರಿಂದ       ಪರವಾಗಿಲ್ಲ ..   “ನೋವುಗಳೂ  ನಗುವಾಗ್ತವೆ ”!!.. J

ನಗೇನು  ಆದ -ಅದೇ  joke ಗಳನ್ನ   ಮತ್ತೆ   ಮತ್ತೆ   ಮಾಡೋಕೆ  ಇಷ್ಟವಾ ??.. ಆದ್ರೆ  ಹೊಸ   joke ಗಳು  ಸುಮ್ನೆ    ಉದ್ಭವಿಸಲ್ಲ  !!..  ನಾಲ್ಕು  ದಿನ  refresh ಆಗಿ  ಹೊಸದನ್ನ   ಸೃಷ್ಟಿಸೋಣ   ಅಂದ್ರೆ … ಉಹುಂ .. ಅದು  ನನ್ನ  ಹೊಟ್ಟೆ  ಪಾಡು !!.. ಇನ್ನೊಬ್ಬ  ನನ್ನ  ಸ್ಥಾನಕ್ಕೆ  ಸಂಚಕಾರ ತರಲ್ಲ    ಅಂತ   ಏನ್ ಗ್ಯಾರಂಟೀ ??.. L

ಅದರೂ  ನಿಮ್ಮ   ನಗು –ಸಂತೋಷ   ನನ್ನನ್ನ   ಮತ್ತೆ   ಮತ್ತೆ   ನಿಮ್ಮ ಮುಂದೆ  ಎಳೆದು  ತಂದು  ನಿಲ್ಲಿಸತ್ತೆ..  ದೀಪದೆಡೆಗೆ   ಆಕರ್ಷಿತವಾಗೋ  ಪತಂಗದ  ತರಹ ... ರೆಕ್ಕೆ  ಸುಟ್ಟು ಕೊಂಡಾದ್ರೂ   ಸರಿಯೇ .. ನಿಮ್ಮ   ನಗುವಲ್ಲಿ  ನನ್ನದೊಂದು  ಚೂರಾದ್ರೂ  ಪಾಲಿರಬೇಕು  ಅನ್ನೋ ಹುಚ್ಚು.. J


 

 -- \/эйждт

Tuesday, April 3, 2012


"ನಾವು  ಮಾಡುವ   ಅದೆಷ್ಟೋ  ಕೆಲಸಗಳಿಗೆ  ಅರ್ಥ  ಇರಲ್ಲ … ಇದೂ  ಹಾಗೇನೆ  …
 ಅರ್ಥವನ್ನೇನಾದ್ರೂ  ಕಂಡ್ಕೋಬಹುದು  ಅಂತ  ಇದ್ರೆ ..  ಅದು  ನಿಮ್ಮ  ಕಿರುನಗೆಯಲ್ಲಿ  ಮಾತ್ರ .."



ಹಳೆತಾದರೂ  ಸಪ್ಪೆಯಾಗದ  ನಿನ್ನೆಗಳು ..
ಚಿಗುರೊಡೆಯುವ  ಹೊಸ  ಹೊಸ  ಕನಸುಗಳು ..
ಇವುಗಳ  ಮಧ್ಯೆ  ವಾಸ್ತವದ  ದರ್ಪ ..

ಪಥ್ಯವಾಗದ ಬೆಳಗಿನ  ಚಿತ್ರಾನ್ನ ..
ಆಡಿದ  ಮಾತು  ಅರ್ಥವಾಗುವ  ಮುನ್ನವೇ 
ಒದ್ದು  ಹೊರಟಳಲ್ಲ ..!!

ನನ್ನ  ತಪ್ಪಾದರೂ  ಏನಿತ್ತು ..??
ಗೆಳೆಯನ  ಬಳಿ  ಸಾರಿದೆ ..
ತಿನ್ನುತ್ತಿದ್ದವ  ಸಾವರಿಸಿಕೊಂಡು ..
ಮೆಲ್ಲನೆ  ಅತ್ತಿತ್ತ  ನೋಡಿ ..
“ಚಿತ್ರಾನ್ನ  ಚೆನ್ನಾಗೇ  ಇದೆಯಲ್ಲೋ ..!!” ಎಂದ .. 

                                                                                                    
                                                                                                                                                                                                                                                --\/эйждт

Thursday, March 22, 2012

ಅವನ ಡೈರಿಯಿಂದ..
ಅವನ ಮಾತಲ್ಲೇ....




                     ಇಲ್ಲಿ ಬರುವ ಎಲ್ಲಾ  ಸಂಗತಿಗಳೂ ಕೇವಲ ಸ್ವಯಂ ಪ್ರೇರಿತ... ಕೇವಲ ನಾನು ಮತ್ತು ನನ್ನ ಕನಸುಗಳೇ ಪಾಲುದಾರರು.. ಅವಳದ್ದೇನೂ ಇಲ್ಲ.. after all ಅವಳಿಗೆ ಇದರ ಬಗ್ಗೆ ಗೊತ್ತೂ ಇಲ್ಲ...ಯಾಕಂದ್ರೆ ಇಲ್ಲಿಯ ತನಕ ನಾನು ಅವಳ ಹತ್ತಿರ  ಮಾತಾಡೇ ಇಲ್ಲ!!..  


"ಬರೆಯೋದಕ್ಕೆ ಕೂತಾಗಲೆಲ್ಲ ಮತ್ತೆ ಮತ್ತೆ ಅವಳೇ ನೆನಪಾಗ್ತಾಳೆ.. ಅದಕ್ಕೇ ಇವತ್ತೊಂದು ಇತಿಶ್ರೀ ಹೇಳೋ ಪ್ರಯತ್ನ....

 ಅವತ್ತೇನೋ ಬೆಳಂಬೆಳಗ್ಗೆಯೇ ಕಂಡ ಕನಸುಗಳಿಗೊಂದಿಷ್ಟು ಅರ್ಥೈಸಬೇಕಂತ retro ರೀತಿಯಲ್ಲ್ಲಿ ನನ್ನ ಪ್ರೇಮ ನಿವೇದನೆಯ ಪತ್ರ ಬರೆಯೋಕೆ ಕೂತೆ..  ಕಸವಾದ ಹಾಳೆಗಳಿಗೆ ಲೆಕ್ಕವಿಲ್ಲ..
ಅಂತೂ ಕೊನೆಗೊಮ್ಮೆ ok  ಎಂದೆನಿಸಿದ   ಕ್ಷಣ... 

ಕೈಯಲ್ಲಿ ಕೊಡಲಾ..??
ಅಥವಾ.....
ಅಂಚೆಯ ಮುಖಾಂತರವಾ??..


ಕೈಯಲ್ಲೇ ಕೊಟ್ಟರೆ ಪ್ರತಿಕ್ರಿಯೆ ಏನಿರಬಹುದು??!!..
ನೀನ್ಯಾರು ಅಂದರೆ...ಏನೆನ್ನಲಿ??..

ನಾನು ನೀನು ಓದ್ತಾ ಇರೋದು ಒಂದೇ college ಕಣೆ....
ಏನೋ ನೋಡ್ತಾ ನೋಡ್ತಾ ಹೀಗೆ ಲವ್ ಆಗೋಯ್ತು.. ಅನ್ನಲಾ..??
how  dare you ?? ಅಂದರೆ....

ಅವಳು ಸಾಯಲಿ...
ನನ್ನದು ಪ್ರೀತಿಯಾ??.. infatuation ??
ಥುತ್.. ಪ್ರಶ್ನೆಗಳೇ!!

ಕೊನೆಗೊಮ್ಮೆ ಸಾಧ್ಯವೇ ಇಲ್ಲವೆಂದೆನಿಸಿದಾಗ..
ಆ ಪತ್ರವನ್ನೇ ಹರಿದೆಸೆಯುವ ಯೋಚನೆ..
ಉಹುಂ... ಅದೂ ನನ್ನಿಂದಾಗಲಿಲ್ಲ..

ಮುಂದೇನಾಯ್ತೂ ಅಂದ್ರೆ..

ಪತ್ರವಿನ್ನೂ ಜೋಪಾನವಾಗಿದೆ..
ಯಾವತ್ತಾದರೂ.. ಹೀಗೇ urgent  ಆಗಿ ಬೇಕಾದರೆ ಇರಲಿ  ಅಂತ...."








--\/эйждт 

Wednesday, March 14, 2012


                           ಅಪರೂಪಕ್ಕೆ   ಹಾಡುಗಳನ್ನ  ಕೇಳೋದು  ನನ್ನ  ಹವ್ಯಾಸ .. ಅದರಲ್ಲೂ  selected  ಹಾಡುಗಳನ್ನ  ಮಾತ್ರ .. ಮೊನ್ನೆ  ಅದ್ಹೇಗೋ  FM ರೇಡಿಯೋ  ಹಚ್ಚಿಬಿಟ್ಟಿದ್ದೆ   !!.. ಅದ್ಯಾರೋ  ಪುಣ್ಯಾತ್ಮ   “ಓ  ನನ್ನ  ಚೇತನಾ ....” request ಮಾಡಿದ್ದ ..      
               
                           ಆ  ಹಾಡು  ಮುಗಿದು  ಮತ್ತೊಂದಿಷ್ಟು     ಹಾಡುಗಳು , RJಗಳ  ತಲೆಹರಟೆ ನಡೆದೇ   ಇತ್ತು  ಅಂತ  ಕಾಣ್ಸತ್ತೆ  .. ನಾನು  ಮಾತ್ರ  ಅದಾವುದರ  ಪರಿವೆ  ಇಲ್ಲದೆ  ಅಕ್ಷರಶಃ  ಚಿಂತನೆಯಲ್ಲಿ  ಬಿದ್ದಿದ್ದೆ ..

                            ಕುವೆಂಪು ಅವರು ..  ಜೀವನದೆಡಗಿನ  ನಮ್ಮ  approach ಹೇಗಿರಬೇಕೆಂಬುದನ್ನ  ಎಷ್ಟು  ಚೊಕ್ಕಟವಾಗಿ , ಸರಳವಾಗಿ   ಹೇಳಿದ್ದಾರಲ್ಲ !!...

                        “.....ಆಗು  ನೀ  ಅನಿಕೇತನ ..”   ಹೌದು.. ಬಹುಪಾಲು  ನಾವು ಇದಕ್ಕೆ ವ್ಯತಿರಿಕ್ತವಾಗಿಯೇ  ನಡೆದುಕೊತೇವೆ... ನಾವಾಯ್ತು .. ನಮ್ಮ  ಪುಟ್ಟ  ಬಳಗವಾಯ್ತು .. ಅದರಾಚೆಗಿನ  ಸಂಗತಿಗಳೆಲ್ಲ  ನಮಗೆ  ತೀರ  ಅಪರಿಚಿತವೆನ್ನಿಸುವಷ್ಟರಮಟ್ಟಿಗೆ   ಇದ್ದುಬಿಡ್ತೇವೆ .. ನಮ್ಮ  comfort zoneಗಳಿಂದ  ಹೊರಬರುವ   ಪ್ರಯತ್ನವನ್ನೇ  ನಾವು  ಮಾಡಲ್ಲ ..    

                        ನಿಂತ  ನೀರಿನಂತಾಗಿ  ಬಿಡ್ತೇವೆ !!..ನನ್ನ  ಹಾಗೆ .. ನನಗೆ  ಚಂದವೆನಿಸಿದ  ನಾಲ್ಕು   ಹಾಡುಗಳನ್ನೇ  ಮತ್ತೆ  ಮತ್ತೆ  ಕೇಳ್ತಾ  ಕೂತಿದ್ರೆ ... ಅದೆಷ್ಟೋ  ಒಳ್ಳೆ  ಹಾಡುಗಳು  ಅನ್ಯಾಯವಾಗಿ  ತಪ್ಪಿ  ಹೋಗತ್ತೆ !..  ಅಂದ  ಮಾತ್ರಕ್ಕೆ  ಸಿಗುವ  ಎಲ್ಲಾ ಹಾಡುಗಳೂ  ಒಳ್ಳೆಯವೇ  ಆಗಿರಬೇಕು  ಎಂತಲೂ  ಅಲ್ಲ .. ಏನೋ  ಹೇಳ್ತಾರಲ್ಲ .. ಕೆಟ್ಟದ್ದು   ಏನೂ  ಅಂತ   ಗೊತ್ತಿದ್ರೆ  ಒಳ್ಳೆಯದರ  ಮೌಲ್ಯ  ಇನ್ನಷ್ಟು  ಸ್ಫುಟವಾಗತ್ತೆ  ಅಂತ .. ಹಾಗೆಯೇ ...

                        ಜೀವನದಲ್ಲಿ  ಒಂದಿಷ್ಟು  ಗುರಿಗಳ  ಜೊತೆ  ಶುದ್ಧ  ಅಲೆಮಾರಿಯ  ಅಲೆದಾಟ , ಹುಡುಕಾಟ  ಸಾಗಬೇಕು .. ಆಗಲೇ  ನಮ್ಮ  ಭಯ , ಸಂಕುಚಿತತೆಗಳ  ಪರಿಧಿಯಾಚೆಗೆ  ಜೀವನವನ್ನ   ಅದ್ಭುತವಾಗಿ  ಆಸ್ವಾದಿಸಬಹುದು  ಅನ್ನೋ  ಮಾತು ಎಷ್ಟು  ಸತ್ಯ ಆಲ್ವಾ??!!..



"...ಓ ಅನಂತವಾಗಿರು ..."


-- \/эйждт