ನೀ – ನಾ ಬರೆವ ಕವನ!!
ಹೊತ್ತಲ್ಲದಾ ಹೊತ್ತಲ್ಲಿ ….
ಪೆನ್ನ ಶಾಯಿಯೇ ಒಣಗಿದಂತೆ ..
ಮನದಿ ಮೂಡಿದ್ದ ಮಬ್ಬುಗತ್ತಲು ..
ಬರೆವ ಹಾಳೆ ಮುದ್ದೆಯಾಗಿ ..
ಕಸವಾಗುವ ಸಮಯದಿ ….
..ಬಂದಿದ್ದಳವಳು ..
'ನಾ' – ನೀ ಬರೆವ 'ಕವನ'ವಾಗುವೆನೆನ್ನುತ ..
ಹಲ್ಲು ಗಿಂಜಿ .. ಮೊಂಬತ್ತಿಯ ಹಚ್ಚಿ ..
ಬರೆಯಲು ಕೂತೆ .. ಕರೆಂಟು ಇರಲಿಲ್ಲವಲ್ಲ ..
ಥುತ್ .. ಅದೆಂತಹ ಗಾಳಿ!!..
ಮೋಡವನ್ನೇನೋ ಸರಿಸಿತು ..
ಆದರೆ .. ಬೆಳಕೆಲ್ಲಿಂದ ಬಂದೀತು??..
ಸೂರ್ಯ ಮುಳುಗಿದಾ ಹೊತ್ತಲ್ಲಿ ..
ಚಂದಿರನಾದರೂ ಬೆಳಕನಿತ್ತಾನು ..
ಎಂದೆಣಿಸಿದರೆ .. ಅಂದೇ ಅಮಾವಾಸ್ಯೆ ..
ಥೋ .. ಕಣ್ಮುಚ್ಚಿ ಮಲಗಿದರೆ …
ಅವಳ ನಗುವಿನಂದದಾ ಬೆಳಕು ..
ಸಾಕಲ್ಲ .. ಕನಸಲ್ಲೇ ಬರೆದೆ ಕವನವ …
ಬೆಳಗ್ಗೆ ಎದ್ದು ಕಂಡ ಕನಸಿಗೊಂದಿಷ್ಟು ..
ಅರ್ಥ ಪೂರೈಸಬೇಕೆನ್ನುತ ..
-- \/эйждт