'ತಲೆ' - 'ಬುಡ'ವಿಲ್ಲದ್ದು..
ಇವತ್ತೂ ಅಷ್ಟೆ.. ನನಗೆ ತಲೆ ನೋವಿದೆ... ಅಂದ್ರೆ ಮೈಗ್ರೇನ್ ನಂತಹದೇನಲ್ಲ..
ಯಾವಾಗಲಾದರೊಮ್ಮೆ.. ಹೀಗೇ ಪುಸ್ತಕ ಹಿಡಿದು ಕೂತಾಗ...ಬೇಡ ಅಂದ್ರೂ ಬಂದು ಬಿಡತ್ತೆ....
ನನಗೂ ಅದೇ ಬೇಕಾಗಿರೋದು.. ನಾನೂ ತಡ ಮಾಡೋಲ್ಲ.. ಅಂಗಾತವಾಗಿ ಮಲಗಿ ಬಿಡ್ತೇನೆ..
ಮತ್ತೊಂದು ಐದು ನಿಮಿಷದಲ್ಲಿ ತಲೆ ನೋವು ಎಲ್ಲಿಗೆ ಓಡಿ ಹೋಗತ್ತೋ..

ಖಂಡಿತವಾಗಿಯೂ ನನಗೆ ಗೊತ್ತಿಲ್ಲ..
ಆವಾಗ ಶುರುವಾಗತ್ತೆ ನೋಡಿ.. ನನ್ನ ಆ ಕೊನೆ ಮೊದಲಿಲ್ಲದ 'ಹುಚ್ಚು' ಪಯಣ..
"ನಾನೇನಾದ್ರೂ ಮಾಡಬೇಕಲ್ಲ".. ಅನ್ನೋದ್ರಿಂದ ಶುರುವಾಗತ್ತೆ... ಏನು ಮಾಡಬಹುದು ಅನ್ನೋ ಪ್ರಶ್ನೆ
ಆವಾಗ ಆವಿರ್ಭವಿಸುತ್ತೆ.. ಅದಕ್ಕೆ ಎದುರುಗಡೆ ಇರೋ ಗೋಡೆ, ತಲೆ ಮೇಲಿರೋ ಛಾವಣಿಯಲ್ಲಿ..
ಉತ್ತರ ಹುಡುಕೋಕೆ ಶುರು ಮಾಡ್ತೇನೆ.. ಅವೂ ಅಷ್ಟೆ ಉತ್ತರವಾಗೋಕೆ ಹಂಬಲಿಸಿ ಕಾದಿರ್ತಾವೆ...
ಎಷ್ಟಂದ್ರೂ ನಮ್ಮ ನೆಂಟಸ್ತನ ನಿನ್ನೆ ಮೊನ್ನೆಯದಲ್ಲವಲ್ಲ!!..
ಆದ್ರೆ ಅವಕ್ಕೂ ಒಂದು ಮಿತಿ ಇದೆ.. googleತರಹ.. ಕೆಲವೊಮ್ಮೆ ಎಷ್ಟೇ refined search
ಕೊಟ್ರೂ ಅವೇ result ಗಳು ಬಂದು ಒಕ್ಕರಿಸ್ತಾವಲ್ಲ.. ಅದೇ ರೀತಿ... ನನಗೂ ಮತ್ತೆ ಮತ್ತೆ ಅದೇ ಉತ್ತರಗಳನ್ನ ನೋಡ್ತಾ ನೋಡ್ತಾ ಅದ್ಯಾವಾಗಲೋ ನಿದ್ರೆ ಬಂದ್ಬಿಟ್ಟಿರತ್ತೆ ....
ಅಲ್ಲಿಗೆ ಏನೋ ಕಡಿದು ಹಾಕಲು ಹೊರಟವ.. 'ಸದ್ದಿಲ್ಲದೆ' ಅವತ್ತಿನ ಮಟ್ಟಿಗೆ ಸತ್ತು ಮಲಗಿರ್ತಾನೆ..
ನಾಳೆ ಮತ್ತೆ ಇದ್ದೇ ಇದೆಯಲ್ಲ.. ಹಾಡಿದ್ದೆ ಹಾಡೋ 'ಕಿಸ್ಬಾಯಿ ದಾಸ'ನ ತರಹ ಅದೇ ರಾಗ ಅದೇ ಹಾಡು....

-- \/эйждт