ಮಳೆ ಬರುವ ಮುನ್ನ :
ಮಳೆಯಾಗದಿರಲಿ.. ಮಳೆಯಾಗದಿರಲಿ..
ಬಿಸಿಲ ಬೇಗೆಯಲಿ ಬೆಂದ ಜೀವಕೆ
ಹೊಸ ಆಸೆಯ ಹುಟ್ಟಿಸಿ ಹೋಗುವಂತೆ ..
ಮಳೆಯಾಗಲಿ..
ಒಡಲ ಧಗೆಯ ತಣಿಸಿ ..
ಸಿಹಿ ಒರತೆಯ ಹುಟ್ಟಿಸುವ
ಮುಂಗಾರಿನ ಝಡಿ ಮಳೆಯಂತೆ
ಅಮೆಲೆ:
ಮರೆಯಾಯಿತು..
ಮಳೆಯಲಿ ನೆನೆದ ಖುಷಿ..
ಕೆಸರಲಿ ಹೂತ ಕಾಲು,
ನೆನೆದ ಮನ.. ಎರಡೂ ಭಾರ...
ಮುಂದೆ:
ಮತ್ತದೇ ಬೇಗೆ...
ಮಳೆಯ ನಿರೀಕ್ಷೆ, ಹಪಹಪಿಕೆ..
--\/эйждт