ಈ ಬರವಣಿಗೆ ಅನ್ನೋದು ಪ್ರೇಯಸಿ ಇದ್ದ ಹಾಗೆ...(ನಾನು ಇನ್ನೂ ತೀರ ಎಳಸು ಪ್ರೇಮಿ.. ಇರಲಿ...)
ಇನ್ನೇನು ಅವಳನ್ನ ಬರಸೆಳೆದಪ್ಪಿಕೊಂಡೆ ಅನ್ನುವಷ್ಟರಲ್ಲಿ ಶುರುವಾಗೋ ಆ ಹುಸಿಮುನಿಸು...
...ಎಷ್ಟು ಓಲೈಸಿದರೂ ಒಲಿಯದ ಆ ಬಿಂಕ... ಕೊಡೋ buildup ......
ಹುಹ್.. ಇನ್ನು ಇವಳೊಂದಿಗೆ ಏಗೋಕೆ ಸಾಧ್ಯವಿಲ್ಲ....ಹೊರಟು ಹೋಗ್ಬಿಡೋಣ....
.....ಅಂತ ಮನದ ಮೂಲೆಯಲ್ಲೋ ಅನ್ನಿಸೋಕೆ ಪ್ರಾರಂಭವಾದಾಗ...
............ಮತ್ತೆ ಮಿನುಗೋಕೆ ಶುರುವಾಗೋ ಆ ಕಣ್ಣುಗಳು......
ಭೇಟಿ ಮುಗಿಸಿ ವಾಪಸ್ ಬರೋವಾಗ ಆಡದೇ ಉಳಿದುಹೋದ.. ಮಾತುಗಳ ಹಾಗೆ..
....ಲೇಖನಿಯ ಶಾಯಿಗೊಂದು ರೂಪ ಕೊಡಲಾಗದ ಅದೆಷ್ಟೋ ವಿಚಾರಗಳು.. ಭಾವನೆಗಳು..
ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಮ್ಮು !!....