Pages

Saturday, November 18, 2017

ಹೀಗೇ  ಗ್ರಹಿಸಿದ್ದು.. 

ಎಲ್ಲರೂ ಸಂಭಾವಿತರೇ .. ಅವರವರ ಪರಿಧಿಯೊಳಗೆ.. 
ನೋಡಬೇಕಾದದ್ದು ಪರಿಧಿಗಳ ವಿಸ್ತೀರ್ಣ ಮಾತ್ರ ..!

-------------------------------------
ಕಟು ಸತ್ಯ

ಕಟು  ಸತ್ಯವನ್ನ  ಅರಗಿಸಿಕೊಳ್ಳೋದು ಕಷ್ಟ.. 
ಹೆಂಗೋ ಅರಗಿಸಿಕೊಂಡ್ವಿ ಅಂದ್ಕೊಳ್ಳಿ .. 
ಅದನ್ನ ಇನ್ನೊಬ್ರಿಗೆ ಹೇಳೋದು ಇನ್ನೂ ಕಷ್ಟ!
ಅದರಲ್ಲೂ.. ಆಪ್ತರಿಗೆ..  ನೋವಾಗದಂತೆ  ಹೇಳೋದಿದೆಯಲ್ಲ .. .ತುಂಬಾನೇ  ಕಷ್ಟ... !

ಅಂದ ಹಾಗೆ ಇದು.. "ಕಟು ಸತ್ಯ"..! 

Thursday, October 12, 2017

ಇನ್ನೇನು ದೀಪಾವಳಿ ಬಂತು.. 
ದಾರಿಯಲ್ಲಿರೋ ಅಂಗಡಿಗಳ ಮುಂದೆಲ್ಲ.. 
ತರಹ ತರಹದ ದೀಪಕಗಳು ..! ಚಂದ... !
   
ನಾನು  :  ಎಷ್ಟು ಚಂದ ಅಲ್ವ..  ಈ .. ದೀಪಾವಳಿ- ದೀಪಕಗಳು .. ಬೆಳಕು..  
ಫ್ರೆಂಡು :   ಸೆಂಟಿ ಆಗ್ಬೇಡ.. ಮುಂದೆ ಇರೋ ಇರೋ "ದೀಪಾ"ನ ನೋಡು.. !


💡Just PJ💡

Sunday, March 12, 2017

 
ಗಗನ್  :
ಲೋ ಸೂರ್ಯ..ನೋಡು  ಅಲ್ಲಿ.. 
ಎಲ್ಲರೂ  ಹೋಳಿ ಆಡ್ತಾ ಇದಾರೆ... 

ಒಬ್ಬರಿಗೊಬ್ಬರು ಬಣ್ಣ ಸೋಕೋದು .. 
ತಪ್ಪಿಸಿಕೊಳ್ಳೋದು... 
ಮೈ ತುಂಬಾ ಬಣ್ಣ.. ಮುಖದ ತುಂಬಾ ನಗು... 

ಎಷ್ಟು ಚೆಂದ ಅಲ್ವ... 

ನಾವೂ  ಹೋಳಿ ಆಡೋಣವೇನೋ .. 
ಪ್ಲೀಸ್ ಇಲ್ಲ ಅನ್ನಬೇಡವೋ.. 

ಸೂರ್ಯ : 

ನೋಡು ಗಗನ್ ,
ನನ್ನ ಡ್ಯೂಟಿ ಶುರು ಮಾಡ್ಕೊಳೋ ಟೈಮ್ ಆಗಿದೆ.. 
ನಾಲ್ಕಾರು ಜನ ಇದ್ದಿದ್ರೆ ಚೆನ್ನಾಗಿರೋದು.. 
ನಾವಿಬ್ರೇ ಆಡೋದ್ರಲ್ಲಿ ಮಜಾ ಎಲ್ಲಿ... ? 

ಮೇಘಾ  : 

ಚಿಂತೆ ಮಾಡ್ಬೇಡ ಸೂರ್ಯಣ್ಣ .. ನಾನೂ ಬಂದೆ.. 
ಮೂರು ಜನ ಸೇರಿ ಸ್ವಲ್ಪ ಹೊತ್ತು ಆಡೋಣ... 
ನಮ್ಮ ರಂಗು ರಂಗಿನ ಹೋಳೀನಾ ಇಡೀ ಜಗತ್ತೇ ನೋಡಲಿ... !

---------------------------------------------------------
ಅಂದ ಹಾಗೆ.. ವಿಷ್ ಯು ಹ್ಯಾಪಿ ಹೋಳಿ  :) 


** ಟೆರೇಸಿನಿಂದ ಕಂಡಿದ್ದು.. ಕೇಳಿದ್ದು...  
  
--\/эйждт

Monday, March 6, 2017

ಬಿಸಿಲ ಬೇಗೆಯ ದಾರಿಯಲಿ..
ದೂರದಿ ನೀರ ಕಂಡಂತೆ ಭಾಸ..

ಹುಸಿಯಾಗದೆ,  ಹಸನಾಗಲಿ
ಬಳಲಿ ಬೆಂಡಾದ ಜೀವದ ಹರಕೆ ..

-----------------------------------

ಒಮ್ಮೊಮ್ಮೆ ಜೀವನ ... ಈ ಸುಡು ಬೇಸಿಗೆಯಂತೆ..  
 ಬೇಜಾರು.. ಸುಸ್ತು..!

ಏನೂ excitement ಇರಲ್ಲ... 

ನೆನಪಿರಲಿ.. 

ಮುಂದೆ ಮತ್ತೆ ಮಳೆ ಆಗತ್ತೆ.. 
ಬೇಸಿಗೆ ಮರೆಯಾಗತ್ತೆ.. ಮನಸು ನಲಿದಾಡುತ್ತೆ.. 

ಕಾಯ್ಬೇಕಷ್ಟೆ !

-- \/эйждт
ಕಿತ್ತು ಹೋಗಿರೋ ದಾರಿ.. ಹಾದು ಹೋಗುವಾಗೆಲ್ಲ ಭರ್ತಿ ಸಿಕ್ತಾ ಇದ್ದ ಧೂಳು...
ಇವುಗಳಿಂದ ಒಂಚೂರು ದೂರ ಹೋಗಬೇಕಾದರೆ ಮನುಷ್ಯ senti  ಆಗಬಹುದಾ...??


ನಾನು ಭ್ರಮಿಸಿಯೂ ಇರಲಿಲ್ಲ...


ಅಂದ ಹಾಗೇ..
ಇಷ್ಟು ದಿನ ಈ area ದಿಂದ ಹೊರಗೆ ಹೋದರೆ ಸಾಕು ಅಂದ್ಕೊಂಡಿದ್ದೆ..

ಇವತ್ತು ಆ ಕಾಲ ಕೂಡಿ ಬಂದಿದೆ...

ಖುಷಿಯಾಗಿರಬೇಕಾಗಿದ್ದ  ಮನಸು ಯಾಕೋ ಕೊಂಚ ಭಾರ...

 ನಾಲ್ಕು ವರ್ಷಗಳ ನಂಟು ...!!

ಮಣ್ಣಿನಲ್ಲಿ ಮೋಹ ಕಂಡಿದ್ದೆ... ಈಗ ಧೂಳಿನಲ್ಲೂ...!!


#ಮನೆ Shift ಮಾಡುವ ಸಂದರ್ಭ..⁠⁠⁠⁠
ನನ್ನ ಬದುಕಿನ ಒಂದಿಷ್ಟು ಪುಟಗಳಲಿ..
ಬಣ್ಣದ ಕನಸಾಗಿದ್ದ ಹುಡುಗಿ..
ಕೊಟ್ಟಳಿಂದು.
ಸುಂದರ ನೆನಪಿನ ಉಡುಗೊರೆಯ.

ಮದುವೆಯ ಮಮತೆಯ ಕರೆಯೋಲೆಯ ಜೊತೆಯಾಗಿ...

ಪಾಪ..  ಅವಳ ತಪ್ಪಿಲ್ಲ..
ಗೊತ್ತಿಲ್ಲ ಆಕೆಗೆ...
ನಾ ಕಂಡ ಕನಸುಗಳ್ಯಾವವೂ..


ಕನಸುಗಳ ಗೋಪುರ ಕಟ್ಟಿ..
ಅವಳ ಕರೆದು ಕೂರಿಸದವ ನಾನು...
ವಾಸ್ತವತೆಯ ಬಿರುಗಾಳಿಗೆ ಅಂಜಿ ..
😂😜
ನಾಲ್ಕು ಹನಿ ಮಳೆಯ ನೆಪ :

ಕೊನೆಗೂ ಮಳೆಯಾಯಿತು.
ಕಾರ್ಮೋಡಗಳು ಕರಗಿ...

 ಮೌನದ ಮುನಿಸು ಮುಗಿದು..
ಮತ್ತೆ ಮಾತಾದಂತೆ..



----------------------------------


ಕಣ್ಸೆಳದ ಮಿನುಗೋ "ಹೊಸ ಕಣ್ಣುಗಳು" ....


ನೋಡ್ತಾ ನೋಡ್ತಾ.. "ಏನೋ ಒಂಥರಾ" ...


ಇಷ್ಟು ಸಾಲದು ಅಂತ ತುಂತುರು "ಮಳೆಯ-ಹಾಡು" ಬೇರೆ...


ಒಂಚೂರು trackನಲ್ಲಿದ್ದ heart--beats ಜಾಸ್ತಿ ಮಾಡಿಕೊಂಡು..  ಮತ್ತೆ ತಾಳ ತಪ್ಪಿ ಕೂತಿದೆ...⁠⁠⁠⁠