Tuesday, December 13, 2011
Tuesday, November 15, 2011
Tuesday, November 1, 2011
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು...
ಸುಮ್ನೆ …
ಅಂದು …
ಮಟ ಮಟ ಮಧ್ಯಾಹ್ನದಿ ಕಂಡೆ ಅವನ ಮುಖ …
..ಕುರುಚಲು ಗಡ್ಡ, ಜಿನುಗುವ ಬೆವರು ಹನಿ …
ಕಣ್ಣು ಅವಳ ಬರುವಿಕೆಯ ನಿರಿಕ್ಷೆಯಲ್ಲಿತ್ತು ….
ಕೇಳಿದೆ …"ಅವಳಾ " …? ವ್ಯಂಗ್ಯವಿತ್ತು ನನ್ನ ಮಾತಲಿ …
ಅವ ಹೇಳಿದ … "ಕಾದಿದ್ದಳಂತೆ ಶಬರಿ …
ರಾಮ ಬರುತಾನೆಂದು .. ರಾಮಾಯಣದಿ …
ಕೊನೆಗೂ ನಿಜವಾಗಿಸಿಬಿಟ್ಟನಲ್ಲ ರಾಮ ….
..'ಹಣ್ಣು' ಮುದುಕಿಯ ಆಸೆಯನ್ನ …"
ಬಾಯಿ ಹಾಕಿದೆ ಮಧ್ಯದಿ …....
.."ಆಯ್ತಪ್ಪ ನೀನೂ 'ಹಣ್ಣು' ಮುದುಕನಾಗಿಬಿಡು" …
ಹೊರಟುಬಿಟ್ಟೆ … ನನಗೂ ಕೆಲಸವಿತ್ತಲ್ಲ ….
ಇಂದು ….
ಅದೇ ಜಾಗದಿ ಕಂಡೆನವನ …
ಮಾಯವಾಗಿತ್ತು ಕುರುಚಲು ಗಡ್ಡ ….
ಕಂಡವನ ಮುಖದಲ್ಲಿ ಅದೆಂತಹುದೋ ಕಿರುನಗೆ …
ತಲೆ ಕೆರೆದುಕೊಂಡೆ .. ಇವ 'ಶಬರಿ'ಯಾಗಿಬಿಟ್ಟನಾ?!...
ಆಗ ಬಂದಪ್ಪಿಕೊಂಡವಳು... 'ಅವಳಲ್ಲ - ಇನ್ನೊಬ್ಬಳು'!!….
ಅವನ ಕಿರುನಗೆಯೀಗ ಸ್ಪಷ್ಟವಾಗಿತ್ತು …
'ಶಬರಿ'ಯ ನೆನೆಯುತ್ತ ನಾನು ಹೊರಟೆ …..
ಪಯಣ .....
ಅಮಾವಾಸ್ಯೆಯ ನೀರವತೆಯಲಿ …
ಹುಣ್ಣಿಮೆಯ ಭೋರ್ಗರೆತದಿ …
ಅಲೆಗಳ ಮೇಲೊಂದು ಪಯಣ ….
ದೂರದ ಧ್ರುವವ ಸೇರುವ ಆಸೆಗೆ ..
ಅಡ್ಡಿಯಾಗದು ಹುಣ್ಣಿಮೆ - ಅಮವಾಸ್ಯೆಗಳೆಂಬ ಭೇದ
ಅಲೆಗಳೊಡನೆ ಸೆಣಸುತ್ತ , ಕೆಣಕುತ್ತ …
ನೀನು ಶತ್ರು .. ನೀನೆ ಮಿತ್ರನೆನ್ನುತ ...
ಸಾಗಬೇಕು ಜೀವನ ಪಯಣ …
--\/эйждт