ಅದೆಲ್ಲೋ … ಯಾರೋ ಹೇಳಿದಂತೆ ..
ಕೇಳುತ್ತ ನಾ .. ಮನದಲ್ಲೇ ನಕ್ಕಂತಹ ನೆನಪು ..
ಮುಸುಕು … ಮುಸುಕು ..
ಬಹುಶಃ ವ್ಯಂಗ್ಯವೇ ಇತ್ತಿರಬೇಕು ..
ಮುಖದಿ ಮೂಡಿದ್ದ ಆ ನನ್ನ ನಗುವಲ್ಲಿ ..
High wayಲಿ ಸಾಗುವಾಗ ಅಚಾನಕ್ಕಾಗಿ ..
ಒಕ್ಕರಿಸುವ ಹೊಂಡದಂತೆಯಾ ??..
ಅಥವಾ ..
ಆನೆಯ ಹಿಡಿಯಲು ತೋಡಿಟ್ಟ ಖೆದ್ದದಂತೆಯಾ …??..
ನಾನು ವಟಗುಟ್ಟಿದ್ದೆ …
ಆದರೆ ….
ಇದೆಲ್ಲವೂ ಹಿಂದಿನ ಮಾತು ….
ಯಾಕೆಂದರೆ …
ನಾನು ಮಾಡದೇ … ನನಗೂ .. ಅದಾಗಿಯೇ ಆಗಿಬಿಟ್ಟಿತಲ್ಲ ..
ನಿಂತ ನಿಲುವಲ್ಲಿ .. ಸೆಳೆವ ಕಂಗಳಲಿ ..
ಅಕ್ಕ -ಪಕ್ಕವ ಮರೆಸಿ ನಿಲ್ಲಿಸುವ ..
.. ಆ ಫಸ್ಟು ಲವ್ವು ..!!
No comments:
Post a Comment