BMS ಬಾಂಧವರಿಗೆ ...
ಇವತ್ತು ಬೆಳಗ್ಗೆಯಿಂದ ತೀರ ಖಾಲಿ ಖಾಲಿ ಅನ್ನಿಸ್ತಾ ಇತ್ತು.. ಸಾಯಂಕಾಲದ
ಹೊತ್ತಿಗೆ ಬ್ಯೂಗಲ್ ರಾಕ್ ಗಾದರೂ ಹೋಗಿ ಬರೋಣ ಅಂತ ಎದ್ರೆ.. sudden ಆಗಿ ಭಾರ ಅನ್ನಿಸಿ ಬಿಡೋದೇ!!...
ಮರೆತೇ ಹೋಗಿತ್ತು ನೋಡಿ.. ನಿನ್ನೆಯಷ್ಟೇ ನೆನಪಿನ ಚೀಲದ ತುಂಬ BMSನಲ್ಲಿನ ಕ್ಷಣಗಳನ್ನ ಗಿಡಿದು ತುಂಬಿಸಿಕೊಂಡಿದೀನಿ ...
ಎಷ್ಟೊಂದು ಸವಿ ನೆನಪುಗಳು!!..
.... ಹೌದು .. ಈ ನಾಲ್ಕು ವರ್ಷಗಳು ಅದ್ಹೇಗೆ ಕಳೆದು ಹೋದವೋ ಗೊತ್ತಿಲ್ಲ್ಲ.. ಮೊನ್ನೆಯಷ್ಟೇ ಯಾರಾದರೂ ragging ಮಾಡಬಹುದಾ ಅನ್ನುವ ಪುಕ್ಕಲುತನದೊಂದಿಗೆ ಕಾಲೇಜ್ ಒಳಗೆ ಕಾಲಿಟ್ಟಿದ್ದು ಕಣ್ಣಿಗೆ ಕಟ್ಟಿದಂತಿದೆ.. ಅಷ್ಟರಲ್ಲ್ಲೇ....
ನಿನ್ನೆಯ ದಿನ...
ನಮ್ಮನ್ನ್ನ ಕಾಲೇಜ್ ನಿಂದ official ಆಗಿ ಹೊರದಬ್ಬಿ ಬಿಟ್ಟರಲ್ಲ!!(farewell ) ....
ಜಗತ್ತು ಓಡ್ತಾ ಇದೆ ಅನ್ನೋದು ಇದಕ್ಕೇನಾ??
ಅದೆಷ್ಟೊಂದು ನೆನಪುಗಳು..!!
ಈ C ಬೆಂಚು, ಬೋರ್ ಹೊಡೆಸೋ ಆ ಕ್ಲಾಸ್ ರೂಮ್ ಪಾಠಗಳು ..
ಲೈಬ್ರರಿ ಸ್ಟೆಪ್ಸು, ಅಲ್ಲಿ ಕುತ್ಗೊಂಡು ಮಾಡಿದ teasing , gossip... ಕಚ್ಚಾಡಿ ತಿಂದ ತಿಂಡಿಗಳು ನಮ್ಮ್ನನ್ನ ಮಿಸ್ ಮಾಡಿಕೊಳ್ಳುತ್ತವೋ ಇಲ್ಲವೋ ಗೊತ್ತಿಲ್ಲ..
ಆದರೆ...
ನಮ್ಮಿಂದ ಇವುಗಳನ್ನ ಮಿಸ್ ಮಾಡಿಕೊಳ್ಳದೇ ಇರಲು ಸಾಧ್ಯವಾ ??..
ಅದರೂ ಪಯಣ ಮುಂದೆ ಸಾಗಬೇಕಲ್ಲ ...
ಈ ನಾಲ್ಕು ವರ್ಷಗಳಲ್ಲಿ ನಮ್ಮಗಳ ಹಾದಿ bms ನ ಸುತ್ತಮುತ್ತಾನೆ ಹರಿದಾಡಿದ್ದವು.. ಮುಂದೆ ಹಾದಿ ಒಂದೇ ಅಗಿರೋದಕ್ಕೆ ಆಗದೇ ಇದ್ರೂ ಅವಾಗವಾಗ ಸಂಧಿಸ್ತಾ ಇರಲಿ ಅನ್ನುವ ಆಶಯದೊಂದಿಗೆ ...
ಸ್ನೇಹವೆಂಬ ಮಮತೆಗೊಂದು ಸಲಾಂ!!..
--\/эйждт
No comments:
Post a Comment