"ನಾವು ಮಾಡುವ ಅದೆಷ್ಟೋ ಕೆಲಸಗಳಿಗೆ ಅರ್ಥ ಇರಲ್ಲ … ಇದೂ
ಹಾಗೇನೆ …
ಅರ್ಥವನ್ನೇನಾದ್ರೂ ಕಂಡ್ಕೋಬಹುದು ಅಂತ ಇದ್ರೆ .. ಅದು ನಿಮ್ಮ ಕಿರುನಗೆಯಲ್ಲಿ
ಮಾತ್ರ .."
ಹಳೆತಾದರೂ ಸಪ್ಪೆಯಾಗದ
ನಿನ್ನೆಗಳು ..
ಚಿಗುರೊಡೆಯುವ ಹೊಸ ಹೊಸ ಕನಸುಗಳು ..
ಇವುಗಳ ಮಧ್ಯೆ ವಾಸ್ತವದ ದರ್ಪ ..
ಪಥ್ಯವಾಗದ ಬೆಳಗಿನ ಚಿತ್ರಾನ್ನ ..
ಆಡಿದ ಮಾತು ಅರ್ಥವಾಗುವ ಮುನ್ನವೇ
ಒದ್ದು ಹೊರಟಳಲ್ಲ ..!!
ನನ್ನ ತಪ್ಪಾದರೂ ಏನಿತ್ತು ..??
ಗೆಳೆಯನ ಬಳಿ ಸಾರಿದೆ ..
ತಿನ್ನುತ್ತಿದ್ದವ ಸಾವರಿಸಿಕೊಂಡು ..
ಮೆಲ್ಲನೆ ಅತ್ತಿತ್ತ ನೋಡಿ ..
“ಚಿತ್ರಾನ್ನ ಚೆನ್ನಾಗೇ ಇದೆಯಲ್ಲೋ ..!!”
ಎಂದ ..
--\/эйждт
No comments:
Post a Comment