ರಾಮಾಯಣ..
ಅದೆಷ್ಟೋ ಸಂಗತಿಗಳು ಬದಲಾಗಲ್ಲ ಅಂದ್ಕೊಂಡಿರ್ತೀವಿ .... ಆದರೆ... ನೋಡನೋಡುತ್ತಿದ್ದಂತೆ... ಅರೆ!!... ಅವು ಹೀಗಿದ್ದವಾ?!!.. ಅನ್ನೋವಷ್ಟರಮಟ್ಟಿಗೆ...ಉಹುಂ....ಎಷ್ಟು ತಲೆ
ಕೆರೆದುಕೊಂಡರೂ,.... ತಲೆಯಲ್ಲಿರೋ ಕೂದಲು ಉದುರಿದವೇ ವಿನಃ,
ಸಮಾಧಾನ ಕೊಡುವಂತಹ ಉತ್ತರ ಸಿಗೋದೆ ಇಲ್ಲ..
ಒಂದು ಕಡೆ ತೀರ ಆಪ್ತವಾಗಿದ್ದ ಸಂಬಂಧಗಳು ಸಮಯದ, ಮತ್ತು ಭೌಗೋಲಿಕ ಪರಿಧಿಯಡಿ ಸಿಲುಕಿ ನಲುಗಿ ಹೊಕ್ತಾವೆ/ಹೋಗಿದಾವೆ.... ಇನ್ನೊಂದು ಕಡೆ ಈ ಎಲ್ಲ ಪರಿಧಿಗಳನ್ನ ಮೀರಿ ನಿಲ್ಲುವಂತಹವನ್ನ ನೋಡ್ತಾ ಇದ್ರೆ...
ಎಲ್ಲವೂ ಹೀಗೆ ಇರಬಾರದೇ ಅಂತ ಅನ್ನಿಸತ್ತೆ.. ಆದರೆ..
ಜಗತ್ತು ಇರೋದೇ ಹೀಗೆ....
ಎಲ್ಲವೂ ನಮಗೆ ಬೇಕಾದ ಹಾಗೆ ಇರೋಕೆ ಸಾಧ್ಯ ಇಲ್ವಲ್ಲ!!...
ಪ್ರತಿ ಹಂತದಲ್ಲೂ ಶುರುವಿನಲ್ಲಿ ಒಂದಿಷ್ಟು ಸಂತೋಷ..
ಕೊನೆಯಲ್ಲಿ.. ಅಗಲಿಕೆಯ ದುಃಖ..
ಬೇಜಾರೇನಪ್ಪಾ ಅಂದ್ರೆ...
ಮತ್ತೆ ಹೊಸತಾಗಿ ಅದೇ-- start from the
scratch ಅಂತಾರಲ್ಲ..
ಅಲ್ಲಿಂದ ಶುರು ಮಾಡಬೇಕಲ್ಲ ಅನ್ನೋದು!!.. ಅದೂ...
ಮುಂದೊಂದಿನ ಮತ್ತೆ ದುಃಖಕ್ಕೆ ಕಾರಣವಾಗಬಹುದು... ಅಂತ ಗೊತ್ತಿದ್ದೂ.... ಇದೊಂದ್ರೀತಿ... ಹುಟ್ತೊವ್ರೆಲ್ಲ ಸಾಯಲೇಬೇಕು ಅಂದಂತೆ...
ಆದರೂ...ಜನ ಹುಟ್ಟುತ್ತಲೇ ಇರಬೇಕು..
ಇನ್ನೊಂದು ಕಡೆ ಸಾಯ್ತಾ ಇರ್ಬೇಕು...ಅನ್ನೋ ಜಗದ ನಿಯಮ...
ಇದೆಲ್ಲದರ ಮಧ್ಯೆ ಬದುಕಿರುವ ಬಡ ಜೀವಕ್ಕೆ ಊರುಗೊಲಾಗಬಹುದು....
ಅಂತ ಇದ್ರೆ .. ಅದು... ಜೀವನ ಪ್ರೀತಿ ಮಾತ್ರ.......
-- \/эйждт
ನೀನು ತುಂಬಾ ಚಂದ ಬರೆಯೋದು ಗೊತ್ತು... ಆದರೆ ಕಾಗುಣಿತದ ಬಗ್ಗೆ ಸ್ವಲ್ಪ ಗಮನ ಇರಲಿ...
ReplyDeleteನಿನ್ನ ಬರಹ ಯಾವುದೇ ಪರಿಧಿಗೆ ಒಳಗಾಗದೇ ನಿರಂತರ ಸಾಗುತ್ತಿರಲಿ...