Tuesday, December 13, 2011
Tuesday, November 15, 2011
Tuesday, November 1, 2011
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು...
ಸುಮ್ನೆ …
ಅಂದು …
ಮಟ ಮಟ ಮಧ್ಯಾಹ್ನದಿ ಕಂಡೆ ಅವನ ಮುಖ …
..ಕುರುಚಲು ಗಡ್ಡ, ಜಿನುಗುವ ಬೆವರು ಹನಿ …
ಕಣ್ಣು ಅವಳ ಬರುವಿಕೆಯ ನಿರಿಕ್ಷೆಯಲ್ಲಿತ್ತು ….
ಕೇಳಿದೆ …"ಅವಳಾ " …? ವ್ಯಂಗ್ಯವಿತ್ತು ನನ್ನ ಮಾತಲಿ …
ಅವ ಹೇಳಿದ … "ಕಾದಿದ್ದಳಂತೆ ಶಬರಿ …
ರಾಮ ಬರುತಾನೆಂದು .. ರಾಮಾಯಣದಿ …
ಕೊನೆಗೂ ನಿಜವಾಗಿಸಿಬಿಟ್ಟನಲ್ಲ ರಾಮ ….
..'ಹಣ್ಣು' ಮುದುಕಿಯ ಆಸೆಯನ್ನ …"
ಬಾಯಿ ಹಾಕಿದೆ ಮಧ್ಯದಿ …....
.."ಆಯ್ತಪ್ಪ ನೀನೂ 'ಹಣ್ಣು' ಮುದುಕನಾಗಿಬಿಡು" …
ಹೊರಟುಬಿಟ್ಟೆ … ನನಗೂ ಕೆಲಸವಿತ್ತಲ್ಲ ….
ಇಂದು ….
ಅದೇ ಜಾಗದಿ ಕಂಡೆನವನ …
ಮಾಯವಾಗಿತ್ತು ಕುರುಚಲು ಗಡ್ಡ ….
ಕಂಡವನ ಮುಖದಲ್ಲಿ ಅದೆಂತಹುದೋ ಕಿರುನಗೆ …
ತಲೆ ಕೆರೆದುಕೊಂಡೆ .. ಇವ 'ಶಬರಿ'ಯಾಗಿಬಿಟ್ಟನಾ?!...
ಆಗ ಬಂದಪ್ಪಿಕೊಂಡವಳು... 'ಅವಳಲ್ಲ - ಇನ್ನೊಬ್ಬಳು'!!….
ಅವನ ಕಿರುನಗೆಯೀಗ ಸ್ಪಷ್ಟವಾಗಿತ್ತು …
'ಶಬರಿ'ಯ ನೆನೆಯುತ್ತ ನಾನು ಹೊರಟೆ …..
ಪಯಣ .....
ಅಮಾವಾಸ್ಯೆಯ ನೀರವತೆಯಲಿ …
ಹುಣ್ಣಿಮೆಯ ಭೋರ್ಗರೆತದಿ …
ಅಲೆಗಳ ಮೇಲೊಂದು ಪಯಣ ….
ದೂರದ ಧ್ರುವವ ಸೇರುವ ಆಸೆಗೆ ..
ಅಡ್ಡಿಯಾಗದು ಹುಣ್ಣಿಮೆ - ಅಮವಾಸ್ಯೆಗಳೆಂಬ ಭೇದ
ಅಲೆಗಳೊಡನೆ ಸೆಣಸುತ್ತ , ಕೆಣಕುತ್ತ …
ನೀನು ಶತ್ರು .. ನೀನೆ ಮಿತ್ರನೆನ್ನುತ ...
ಸಾಗಬೇಕು ಜೀವನ ಪಯಣ …
--\/эйждт
Thursday, November 4, 2010
Fwd: Happy Deepawali :)
ಆರದಿರಲಿ ಈ ಬೆಳಕು ಎಂದೆಂದಿಗೂ ......
Saturday, October 23, 2010
Saturday, April 17, 2010
ಅವಳು ..ಅವಳೆಂದರೆ ನನಗೆ ಎಲ್ಲಿಲ್ಲದ ಪ್ರೀತಿಏನು ಕೇಳಿದರೂ ಕೊಟ್ಟು ಬಿಡುವೆನೆಂಬ ನೀತಿಅವಳೆಂದರೆ ನನ್ನ ಪ್ರಾಣ ,ಬಾಳಿಗೊಂದು ಅರ್ಥಅವಳಿಲ್ಲದೆ ನನ್ನ ಬಾಳು ವ್ಯರ್ಥಅವಳಿಗೂ ಅಷ್ಟೇ ನಾನೆಂದರೆ ಚಿನ್ನನಾನೆದುರಿದ್ದರೆ ಮರೆತು ಬಿಡುವಳು ಸಮಯವನ್ನನನಗೇನಾದರೂ ಆದರೆ ಪ್ರಾಣ ಹೋದಂತೆ ಆಡುವಳು ನೋಡಿಯಾಕೆಂದರೆ ನಾನೇ ಅವಳ ಕರುಳ ಕುಡಿ .
ನೆನಪಿಗಾಗಿಮನದನ್ನೆ ಮತ್ತೆ ನೆನಪಾಗಿ ಕಾಡಿಮನದಾಳದ ನೋವು ಮಾತಾಗಿಮಾತು ಬರಿದಾಗಿ, ಮೌನಿಯಾಗಿಮೌನಕೆ ಅಶ್ರುಧಾರೆ ಸಾಥಿಯಾಗಿಆ ಅಶ್ರುವೆ ಲೇಖನಿಗೆ ಶಾಯಿಯಾಗಿಬರೆದಿರುವೆ ನಾ ಮರೆಯಲಾರದ ನೆನಪಿಗಾಗಿ.