ಗಗನ್ :
ಲೋ ಸೂರ್ಯ..ನೋಡು ಅಲ್ಲಿ..
ಎಲ್ಲರೂ ಹೋಳಿ ಆಡ್ತಾ ಇದಾರೆ...
ಒಬ್ಬರಿಗೊಬ್ಬರು ಬಣ್ಣ ಸೋಕೋದು ..
ತಪ್ಪಿಸಿಕೊಳ್ಳೋದು...
ಮೈ ತುಂಬಾ ಬಣ್ಣ.. ಮುಖದ ತುಂಬಾ ನಗು...
ಎಷ್ಟು ಚೆಂದ ಅಲ್ವ...
ನಾವೂ ಹೋಳಿ ಆಡೋಣವೇನೋ ..
ಪ್ಲೀಸ್ ಇಲ್ಲ ಅನ್ನಬೇಡವೋ..
ಸೂರ್ಯ :
ನೋಡು ಗಗನ್ ,
ನನ್ನ ಡ್ಯೂಟಿ ಶುರು ಮಾಡ್ಕೊಳೋ ಟೈಮ್ ಆಗಿದೆ..
ನಾಲ್ಕಾರು ಜನ ಇದ್ದಿದ್ರೆ ಚೆನ್ನಾಗಿರೋದು..
ನಾವಿಬ್ರೇ ಆಡೋದ್ರಲ್ಲಿ ಮಜಾ ಎಲ್ಲಿ... ?
ಮೇಘಾ :
ಚಿಂತೆ ಮಾಡ್ಬೇಡ ಸೂರ್ಯಣ್ಣ .. ನಾನೂ ಬಂದೆ..
ಮೂರು ಜನ ಸೇರಿ ಸ್ವಲ್ಪ ಹೊತ್ತು ಆಡೋಣ...
ನಮ್ಮ ರಂಗು ರಂಗಿನ ಹೋಳೀನಾ ಇಡೀ ಜಗತ್ತೇ ನೋಡಲಿ... !
---------------------------------------------------------
ಅಂದ ಹಾಗೆ.. ವಿಷ್ ಯು ಹ್ಯಾಪಿ ಹೋಳಿ :)
** ಟೆರೇಸಿನಿಂದ ಕಂಡಿದ್ದು.. ಕೇಳಿದ್ದು...