ಇದು ಕಥೆಯಲ್ಲ..
ಆತ ಪಯಣಿಗ.. ಹಲವಾರು ವರ್ಷಗಳಿಂದ ಅಖಂಡವಾಗಿ ನಡೀತಾನೆ ಇದಾನೆ .. ಸುಸ್ತಾಗಿ ನಿಂತಿದ್ದು ಇಲ್ಲವೇನೋ.. ದಾರಿಯಲ್ಲಿನ ಕಲ್ಲ್ಲು ಮುಳ್ಳುಗಳನ್ನು ಲೆಕ್ಕಿಸದ ಅನವರತ, ಅವಿಶ್ರಾಂತ ಪಯಣ - ಅನ್ನುವುದಕ್ಕಿಂತಲೂ ಹೆಚ್ಚಿನದಾಗಿ, ಅದೊಂದು ಬಾಹ್ಯ ಪ್ರಪಂಚದ ಅರಿವೇ ಇಲ್ಲ್ಲದ ಹುಚ್ಚು ಪಯಣ.. ಯಾಕಪ್ಪಾ ಈ ಪರಿಯ ಪಯಣ?.. ಅಂತ ಕೇಳಿದ್ರೆ ಬಹುಶಃ ಅವನಲ್ಲಿ ಉತ್ತರವಿಲ್ಲ..
ಹೌದು...ಅವನ ರೀತಿಯೇ ಹಾಗೆ!!..
ಈ ಪ್ರಪಂಚ ದೊಡ್ಡದಾಯಿತೆಂದು ತನ್ನದೇ ಲೋಕವನ್ನ ಸೃಷ್ಟಿಸಿಕೊಂಡು ಬಿಟ್ಟಿದ್ದಾನೆ.. ಅಲ್ಲಿರುವುದು ಕೇವಲ ಕನಸುಗಳು.. ಮತ್ತು ಕನಸುಗಳು..
ಇಷ್ಟನ್ನ ಬಿಟ್ಟು ಮತ್ತೇನಾದರೂ ಸಿಗಬಹುದು ಅಂತ ತಡಕಾಡಿದರೆ..
ಮೆಲುಕಿದಷ್ಟೂ ಬಾಹ್ಯದ ಕಲ್ಲು ಮುಳ್ಳುಗಳಿಗಿಂತಲೂ ಹೆಚ್ಚ್ಚಾಗಿ ಚುಚ್ಚುವ ಹಳೆಯ ಪುಟ್ಟ ಪುಟ್ಟ ತಪ್ಪುಗಳು ..
ಪಟ್ಟ ಪಶ್ಚಾತಾಪ... ಪುಳಕಿತಗೊಳಿಸುವ ಆರ್ದ್ರ ನೆನಪುಗಳು .. ಇದರೊಟ್ಟಿಗೆ ಕಾಡುವ ಗಾಢ ಮೌನ..
ಹಾಗಂತ ಆತ ಬಾಹ್ಯದೊಂದಿಗೆ ಸಂವೇದನೆಯನ್ನೇ ಕಳೆದುಕೊಂಡಿದಾನೆ ಅಂದ್ರೆ.. ಅದು ಖಂಡಿತವಾಗಿಯೂ ತಪ್ಪು...
ಆತ 'ಆಮೆ'ಯಂತಹವ .. ತನ್ನ ದುಃಖ ಸಂತೋಷಗಳೆಲ್ಲ ಚಿಪ್ಪಿನಂತಹ ಅವನ ಲೋಕದೊಳಗೆ ಮುಡಿಪು..
ಅಲ್ಲಿಯೂ ಇಲ್ಲಿಯ ಹಾಗೇ 'ತಂತಿ' ವೀಣೆಯ ಝೇಂಕಾರವಾಗ್ತದೆ ..
ಆದರೆ ಉಲಿಯುವ ಕೋಗಿಲೆ ಸದೃಶ ಧ್ವನಿ ಕರ್ಣ ಕಠೋರವಾಗುವ ಭಯವಿಲ್ಲ..
ಆದರೆ ಉಲಿಯುವ ಕೋಗಿಲೆ ಸದೃಶ ಧ್ವನಿ ಕರ್ಣ ಕಠೋರವಾಗುವ ಭಯವಿಲ್ಲ..
ಹೊರಗಿನ ನೋವು, ದುಃಖ ದುಮ್ಮಾನಗಳಿಗೆ ಪರ್ಯಾಯವಾದ ಆನಂದವನ್ನು..
ಅವನ ಲೋಕದಲ್ಲಿ ಕಂಡುಕೊಳ್ಳೋ ಪ್ರಯತ್ನವಷ್ಟೇ..
ಅವನ ಲೋಕದಲ್ಲಿ ಕಂಡುಕೊಳ್ಳೋ ಪ್ರಯತ್ನವಷ್ಟೇ..
ನಮ್ಮೊಳಗೂ ಇಂತಹವನೊಬ್ಬನಿದಾನಾ ??..
ಇದ್ರೆ ಹೊರಗೆ ಕರ್ಕೊಂಡು ಬರೋಣ..
-- \/эйждт

No comments:
Post a Comment