Pages

Monday, March 6, 2017

ಕಿತ್ತು ಹೋಗಿರೋ ದಾರಿ.. ಹಾದು ಹೋಗುವಾಗೆಲ್ಲ ಭರ್ತಿ ಸಿಕ್ತಾ ಇದ್ದ ಧೂಳು...
ಇವುಗಳಿಂದ ಒಂಚೂರು ದೂರ ಹೋಗಬೇಕಾದರೆ ಮನುಷ್ಯ senti  ಆಗಬಹುದಾ...??


ನಾನು ಭ್ರಮಿಸಿಯೂ ಇರಲಿಲ್ಲ...


ಅಂದ ಹಾಗೇ..
ಇಷ್ಟು ದಿನ ಈ area ದಿಂದ ಹೊರಗೆ ಹೋದರೆ ಸಾಕು ಅಂದ್ಕೊಂಡಿದ್ದೆ..

ಇವತ್ತು ಆ ಕಾಲ ಕೂಡಿ ಬಂದಿದೆ...

ಖುಷಿಯಾಗಿರಬೇಕಾಗಿದ್ದ  ಮನಸು ಯಾಕೋ ಕೊಂಚ ಭಾರ...

 ನಾಲ್ಕು ವರ್ಷಗಳ ನಂಟು ...!!

ಮಣ್ಣಿನಲ್ಲಿ ಮೋಹ ಕಂಡಿದ್ದೆ... ಈಗ ಧೂಳಿನಲ್ಲೂ...!!


#ಮನೆ Shift ಮಾಡುವ ಸಂದರ್ಭ..⁠⁠⁠⁠
ನನ್ನ ಬದುಕಿನ ಒಂದಿಷ್ಟು ಪುಟಗಳಲಿ..
ಬಣ್ಣದ ಕನಸಾಗಿದ್ದ ಹುಡುಗಿ..
ಕೊಟ್ಟಳಿಂದು.
ಸುಂದರ ನೆನಪಿನ ಉಡುಗೊರೆಯ.

ಮದುವೆಯ ಮಮತೆಯ ಕರೆಯೋಲೆಯ ಜೊತೆಯಾಗಿ...

ಪಾಪ..  ಅವಳ ತಪ್ಪಿಲ್ಲ..
ಗೊತ್ತಿಲ್ಲ ಆಕೆಗೆ...
ನಾ ಕಂಡ ಕನಸುಗಳ್ಯಾವವೂ..


ಕನಸುಗಳ ಗೋಪುರ ಕಟ್ಟಿ..
ಅವಳ ಕರೆದು ಕೂರಿಸದವ ನಾನು...
ವಾಸ್ತವತೆಯ ಬಿರುಗಾಳಿಗೆ ಅಂಜಿ ..
😂😜
ನಾಲ್ಕು ಹನಿ ಮಳೆಯ ನೆಪ :

ಕೊನೆಗೂ ಮಳೆಯಾಯಿತು.
ಕಾರ್ಮೋಡಗಳು ಕರಗಿ...

 ಮೌನದ ಮುನಿಸು ಮುಗಿದು..
ಮತ್ತೆ ಮಾತಾದಂತೆ..



----------------------------------


ಕಣ್ಸೆಳದ ಮಿನುಗೋ "ಹೊಸ ಕಣ್ಣುಗಳು" ....


ನೋಡ್ತಾ ನೋಡ್ತಾ.. "ಏನೋ ಒಂಥರಾ" ...


ಇಷ್ಟು ಸಾಲದು ಅಂತ ತುಂತುರು "ಮಳೆಯ-ಹಾಡು" ಬೇರೆ...


ಒಂಚೂರು trackನಲ್ಲಿದ್ದ heart--beats ಜಾಸ್ತಿ ಮಾಡಿಕೊಂಡು..  ಮತ್ತೆ ತಾಳ ತಪ್ಪಿ ಕೂತಿದೆ...⁠⁠⁠⁠
ಮಾರು ದೂರ ಸರಿದಳು..
ಮುಂದೆ ಬರುತ್ತಿದ್ದ ಚೆಂದುಳ್ಳಿ ಚೆಲುವೆ...

ನನ್ನ ನೋಡಿಯಾ?....
ಮನದಲ್ಲಿ ದುಗುಡದ ಪ್ರಶ್ನೆ...

ಉತ್ತರವಾಯ್ತ..
ಹಿಂದಿನಿಂದ ಓಡಿ ಬಂದ ನಾಯಿ...!!

ಮನಸು ಕೊಂಚ ನಿರಾಳ.. 😂⁠⁠⁠⁠
ಮಳೆಗಾಗಿ ಹವಣಿಸಿದ್ದ ಮರ...
ಖುಷಿ ಪಡುವಂತಿಲ್ಲ...
ಧೋ ಎಂದು ಭೋರ್ಗರೆದ  ಮಳೆಗೆ..

ಜೊತೆಯಾಗಿ ಬಂದ ಬಿರುಗಾಳಿಗೆ...
ಅಂಗಾತ ಮಲಗಿದೆ..
ಸಾಥಿಯಾಗಿದ್ದ 'ಹಿರಿ'  ಮರ..

ಗಾಳಿ - ಮರದ ಶಬ್ಧ ನಿಂತಿದೆ...
ಇನ್ನುಳಿದಿದ್ದು ಬರೀ ಸ್ಮಶಾನ ಮೌನ..


(ಅಜ್ಜಿಗೊಂದು ನುಡಿ ನಮನ)⁠⁠⁠⁠
ಶುರುವಾಗುವ ಮುನ್ನವೇ ... 




ಮೃದುವಾದ ಮಾತು.. 
ಸ್ಮಿತ ವದನ.. 
ಒಟ್ಟಿನಲ್ಲಿ..  ಸೌಮ್ಯ ಸ್ವಭಾವದ ಹುಡುಗಿ...! 

ಗುರೂ .. " ಸ್ಟೋರಿ ಶುರುಮಾಡಿಕೊಳ್ಳೋಣವೇ"?
ಗೊತ್ತಲ್ಲ ..  ಮನಸು- ಮರ್ಕಟ.. ! 
ಕುಣಿದಾಡೋಕೆ  ಶುರು.. !

3-4 ದಿನ.. ಅವಳನ್ನ ಕಂಡಾಗೆಲ್ಲ...  ಮನಸಿನಲ್ಲಿ ಗುಣಾಕಾರ  ಭಾಗಾಕಾರ..  

ಇವತ್ತು ಅವಳ  ಪ್ಲೇಟ್ ಅಲ್ಲಿ  ಮೂಳೆ ನೋಡಿದಾಗಲೇ .. 
ಲೆಕ್ಕಾಚಾರ ಬಗೆ ಹರಿದದ್ದು..! 

FULL STOP .!

Saturday, May 11, 2013

ಅಲ್ಲೆಲ್ಲೋ ಮಳೆಯಾಗುವುದಕ್ಕೆ.... 
ಗುಡುಗು ಮಿಂಚು ಇಲ್ಲೇತಕೆ ?... 
ಹಾರಿದ್ದೆ.. ಆಕಾಶದೆತ್ತರಕ್ಕೆ.... 
ಕನಸಿಗೆ ರೆಕ್ಕೆ-ಪುಕ್ಕವ ಪೋಣಿಸಿ.... 
              ...

ಥೊ..ಇಲ್ಲೂ  ಬಂತಲ್ಲ ಮಳೆ.. 
ತೋಯ್ದವಲ್ಲ...  ರೆಕ್ಕೆ-ಪುಕ್ಕ... 
ಧೊಪ್ಪನೆ ಬಿದ್ದಿದ್ದೆ... ಫುಟ್ಪಾತಿನಲಿ.... 
ಭಾರವಾದ ರೆಕ್ಕೆಗಳಲಿ ಹಾರಲಾಗದೇ.. 
ಬಿದ್ದ ರಭಸಕ್ಕೆ.... ಒಡೆದು ಹೋದವು.. 
ಅಲ್ಲೇ ಇದ್ದ.... ಫುಟ್ಪಾತು ಹುಡುಗನ
ಬಣ್ಣ ಬಣ್ಣದ ಗುಳ್ಳೆ ಮಾರುವ ಕನಸು!! .. 
ಇಬ್ಬರಿಗೂ... ವಿಪರೀತ ನೋವು...  
              ...

ಮಳೆಯಾದರೇನಂತೆ...
ಮತ್ತೆ ಹಾರಬೇಕು  ಆಕಾಶದೆತ್ತರಕೆ.. 
ಈ ಬಾರಿ..ರೈನು ಕೋಟು ತೊಟ್ಟು!!
              ...

 -- \/эйждт

(ಮೊನ್ನೆಯ ಗುಡುಗು- ಮಳೆ ಅದ್ಯಾಕೋ ಇಷ್ಟವಾಗದೇ ಇದ್ದಾಗ!)