ನಮ್ಮ ದೃಷ್ಟಿಯ ಮೇಲೆ ದೃಶ್ಯ ನಿರ್ಧಾರವಾಗತ್ತೆ .. ನಿನ್ನೆ ಹಾಸ್ಯ ಕಾರ್ಯಕ್ರಮವೊಂದನ್ನ ವೀಕ್ಷಿಸುತ್ತಾ ಇದ್ದೆ .. ಆದ್ರೆ.., ಅಲ್ಲಿ ನನಗೆ ಕಾಣ್ತಾ ಇದ್ದಿದ್ದು ….
ಸನ್ಮಿತ್ರ ನಗೆಯಭಿಮಾನಿ,
"ನನಗೆ ಇತ್ತೀಚೆಗೆ ಈ ಕಾರ್ಯಕ್ರಮಗಳನ್ನ ಮಾಡೋದು ತುಂಬಾ ಬೋರಾಗ್ತಾ ಇದೆ .. ನನ್ನಲ್ಲಿ ಇನ್ನು ಹೊಸ joke ಗಳನ್ನ ಸೃಷ್ಟಿಸುವುದು ಸಾಧ್ಯವಿಲ್ಲ ”.. ಅಂತ ಪರಿಚಯದವರ ಹತ್ತಿರ ಹೇಳ್ದೆ .. ಅವ್ರು – “ನೀವ್ಬಿಡೀಪ್ಪ .. ತುಂಬಾ joke ಮಾಡ್ತೀರ ..” ಅಂದು ಬಿಡೋದೇ !!.. ಜನ ನನ್ನನ್ನ serious ಆಗೇ ತಗೋಳಲ್ಲ !!.. L
ಇನ್ನೊಂದಿನ ನನ್ನ ಕಾರ್ಯಕ್ರಮ ನಡೀತಾ ಇರೋವಾಗ .. “ಅವತ್ತೂ ಇದೇ joke ಮಾಡಿದ್ದಾ ಕಣೆ!!”.. ಅಂತ ಮಹಿಳಾ ಮಣಿಯೊಬ್ಬಳು ತನ್ನ ಸೆರಗನ್ನ ಸರಿ ಮಾಡ್ಕೊಳ್ತಾ ಪಿಸುಗುಟ್ಟಿದಳು .. ಎಷ್ಟು ಪಿಚ್ಚೆನ್ನಿಸ್ತು ಗೊತ್ತಾ .. L
ಏನೋ ನನ್ನ ಮೇಲೆ ನಾನೇ joke ಮಾಡ್ಕೊಳೋದರಿಂದ ಪರವಾಗಿಲ್ಲ .. “ನೋವುಗಳೂ ನಗುವಾಗ್ತವೆ ”!!.. J
ನಗೇನು ಆದ -ಅದೇ joke ಗಳನ್ನ ಮತ್ತೆ ಮತ್ತೆ ಮಾಡೋಕೆ ಇಷ್ಟವಾ ??.. ಆದ್ರೆ ಹೊಸ joke ಗಳು ಸುಮ್ನೆ ಉದ್ಭವಿಸಲ್ಲ !!.. ನಾಲ್ಕು ದಿನ refresh ಆಗಿ ಹೊಸದನ್ನ ಸೃಷ್ಟಿಸೋಣ ಅಂದ್ರೆ … ಉಹುಂ .. ಅದು ನನ್ನ ಹೊಟ್ಟೆ ಪಾಡು !!.. ಇನ್ನೊಬ್ಬ ನನ್ನ ಸ್ಥಾನಕ್ಕೆ ಸಂಚಕಾರ ತರಲ್ಲ ಅಂತ ಏನ್ ಗ್ಯಾರಂಟೀ ??.. L
ಅದರೂ ನಿಮ್ಮ ನಗು –ಸಂತೋಷ ನನ್ನನ್ನ ಮತ್ತೆ ಮತ್ತೆ ನಿಮ್ಮ ಮುಂದೆ ಎಳೆದು ತಂದು ನಿಲ್ಲಿಸತ್ತೆ.. ದೀಪದೆಡೆಗೆ ಆಕರ್ಷಿತವಾಗೋ ಪತಂಗದ ತರಹ ... ರೆಕ್ಕೆ ಸುಟ್ಟು ಕೊಂಡಾದ್ರೂ ಸರಿಯೇ .. ನಿಮ್ಮ ನಗುವಲ್ಲಿ ನನ್ನದೊಂದು ಚೂರಾದ್ರೂ ಪಾಲಿರಬೇಕು ಅನ್ನೋ ಹುಚ್ಚು.. J
-- \/эйждт
