Pages

Tuesday, November 15, 2011


                                       ಮೆಲುಕು 


ಮೊನ್ನೆ ಯಾಕೋ ನನ್ನೊಳಗೆ ತುಕ್ಕು ಹಿಡಿದು ಕೂತಿದ್ದ "ಬಾರಿಸು ಕನ್ನಡ ಡಿಂಡಿಮವ" ಎಂಬ 'ಗಂಟೆ'ಯ   ನೆನಪಾಯ್ತು...   ತುಂಬಾ ದಿನ ಆಗಿತ್ತಲ್ಲ.. ಆ ಗಂಟೆಯ ಸವರುತ್ತ... ಶುಚಿಗೊಳಿಸೋಣವೆಂದು 'ಮನೆ'ಯಂಗಳದಿ ಕೂತೆ... 
             ...ಒಂದೊಂದು ತುಕ್ಕನ್ನೂ ತೆಗೆಯುತ್ತ  ಹೋದ ಹಾಗೆ ಹಿಂದೆ ಅಡಗಿ ಕೂತಿದ್ದ "ನಮ್ಮೂರ ಶಾಲೆಯೆಂಬ-ಕನ್ನಡತಿ"ಯ ಕಂದ 'ರಾಘವ' ಸಿಂಬಳ ಸುರಿಸುತ್ತ... ಜರಿಯುತ್ತಿರುವ ಚಡ್ಡಿಯ ಮೇಲೇರಿಸುತ್ತ ಕೈಯಲ್ಲೊಂದು 'ಗಿರಿಗಿಟ್ಟಿ'ಯ ಹಿಡಿದು ಹೆಗಲಿಗೆ 'ಪಾಟಿ-ಕಡ್ಡಿಯ' ಚೀಲವ ಏರಿಸಿ ದೂರದ ಶಾಲೆಗೆ ಹೊರಟಿದ್ದ....
              .....ಎದುರು ಮನೆಯ ಗೇಟಿನ ಕಿರುಗುಡುವ ಸದ್ದು ನನ್ನನ್ನು ವಾಸ್ತವಕ್ಕೆ ಬೇಡವೆಂದರೂ ಕರೆತಂದಿತ್ತು... 
              ಆ  ಗೇಟಿನಿಂದ ಗಜಗಾತ್ರದ ಬ್ಯಾಗಿಗೆ ನೇತು ಹಾಕಿದಂತೆ ಕಾಣುತ್ತಿದ್ದ ಪೋರ-'ಕಿಶೋರ' 
ಆಟೋ-ಅಂಕಲ್ ನ ಬರವ ನಿರೀಕ್ಷಿಸುತ್ತ ಇಸ್ತ್ರಿಮಾಡಿದ ಅಂಗಿ-ಚಡ್ಡಿ, ಫಳ ಫಳನೆ ಹೊಳೆಯುವ ಬೂಟು ತೊಟ್ಟು ವಯಸ್ಸಿಗೆ ಮೀರಿದ ಗಾಂಭೀರ್ಯದೊಂದಿಗೆ ನಿಂತಿದ್ದ.....   
              ಯಾಕೋ ನನ್ನ 'ಡಿಂಡಿಮವ' ಮುಂದುವರೆಸಲಾಗೆಲೇ ಇಲ್ಲ.... ಮತ್ತು...
 ಎದುರು ನಿಂತಿದ್ದ ಕಿಶೋರನಲ್ಲಿ ಕಾಣಬೇಕಾಗಿದ್ದ ನನ್ನ ರಾಘವನನ್ನು ಕಾಣಲಾರದೇ ಹೋದೆ...
 

                                                                                                         
  

                                                                                                                                               --\/эйждт

Tuesday, November 1, 2011

 

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು...

                               

                                ಸುಮ್ನೆ …

ಅಂದು …

              ಮಟ  ಮಟ  ಮಧ್ಯಾಹ್ನದಿ    ಕಂಡೆ  ಅವನ  ಮುಖ …

               ..ಕುರುಚಲು  ಗಡ್ಡ,  ಜಿನುಗುವ  ಬೆವರು  ಹನಿ …

              ಕಣ್ಣು  ಅವಳ  ಬರುವಿಕೆಯ  ನಿರಿಕ್ಷೆಯಲ್ಲಿತ್ತು ….

              ಕೇಳಿದೆ …"ಅವಳಾ " …?  ವ್ಯಂಗ್ಯವಿತ್ತು  ನನ್ನ  ಮಾತಲಿ …

              ಅವ  ಹೇಳಿದ … "ಕಾದಿದ್ದಳಂತೆ  ಶಬರಿ  …

              ರಾಮ  ಬರುತಾನೆಂದು .. ರಾಮಾಯಣದಿ …

              ಕೊನೆಗೂ   ನಿಜವಾಗಿಸಿಬಿಟ್ಟನಲ್ಲ  ರಾಮ ….

              ..'ಹಣ್ಣು' ಮುದುಕಿಯ  ಆಸೆಯನ್ನ …"

ಬಾಯಿ  ಹಾಕಿದೆ  ಮಧ್ಯದಿ …....

              .."ಆಯ್ತಪ್ಪ  ನೀನೂ  'ಹಣ್ಣು' ಮುದುಕನಾಗಿಬಿಡು" …

              ಹೊರಟುಬಿಟ್ಟೆ … ನನಗೂ  ಕೆಲಸವಿತ್ತಲ್ಲ ….

ಇಂದು ….

               ಅದೇ  ಜಾಗದಿ  ಕಂಡೆನವನ …

               ಮಾಯವಾಗಿತ್ತು  ಕುರುಚಲು  ಗಡ್ಡ ….

               ಕಂಡವನ  ಮುಖದಲ್ಲಿ  ಅದೆಂತಹುದೋ  ಕಿರುನಗೆ …

               ತಲೆ  ಕೆರೆದುಕೊಂಡೆ .. ಇವ  'ಶಬರಿ'ಯಾಗಿಬಿಟ್ಟನಾ?!...

                ಆಗ  ಬಂದಪ್ಪಿಕೊಂಡವಳು... 'ಅವಳಲ್ಲ - ಇನ್ನೊಬ್ಬಳು'!!….

               ಅವನ  ಕಿರುನಗೆಯೀಗ  ಸ್ಪಷ್ಟವಾಗಿತ್ತು …

               'ಶಬರಿ'ಯ  ನೆನೆಯುತ್ತ  ನಾನು  ಹೊರಟೆ …..

 

                      ಪಯಣ .....


                             

                        ಅಮಾವಾಸ್ಯೆಯ  ನೀರವತೆಯಲಿ … 

                        ಹುಣ್ಣಿಮೆಯ  ಭೋರ್ಗರೆತದಿ …

                        ಅಲೆಗಳ ಮೇಲೊಂದು  ಪಯಣ ….

                        ದೂರದ  ಧ್ರುವವ  ಸೇರುವ  ಆಸೆಗೆ ..

                        ಅಡ್ಡಿಯಾಗದು  ಹುಣ್ಣಿಮೆ - ಅಮವಾಸ್ಯೆಗಳೆಂಬ  ಭೇದ 

                        ಅಲೆಗಳೊಡನೆ  ಸೆಣಸುತ್ತ , ಕೆಣಕುತ್ತ …

                        ನೀನು  ಶತ್ರು .. ನೀನೆ  ಮಿತ್ರನೆನ್ನುತ ...

                         ಸಾಗಬೇಕು  ಜೀವನ  ಪಯಣ …


                                                                                        --\/эйждт



Thursday, November 4, 2010

Fwd: Happy Deepawali :)


 
ಬಾಳ ಬೆಳಗುವ ಜ್ಞಾನದ ಬೆಳಕನು ಬೆಳಗಿಸೋಣ 

ಎಲ್ಲರಿಗೂ ದೀಪಾವಳಿಯ ಶುಭಾಶಯಗಳು...

diyas-645_1288863425.jpg




ಆರದಿರಲಿ ಈ ಬೆಳಕು ಎಂದೆಂದಿಗೂ ......

Saturday, October 23, 2010

ಋಣಿ
 
 
ಅವಳ  ಕಂಡರೆ  ಏನೋ  ಪುಳಕ
 ನೋಡುತ್ತಲೇ  ಇರಬೇಕೆನ್ನುವ  ತವಕ 
 ನರ  ನಾಡಿಗಳಲಿ  ವಿದ್ಯುತ್  ಸಂಚಾರ 
 ಹೃದಯದಿ  ತಲ್ಲಣ ,  ಭಾವನೆಗಳ  ನರ್ತನ    
ಹೇಳಲಿ  ಯಾರಲಿ  ಈ  ಭಾವನೆಗಳನ 
 ಎಂದಾಲೋಚಿಸಿದಗೆಲ್ಲ  ಕಾಣುವುದೀ ಲೇಖನಿ
  ನನ್ನೀ  ಭಾವನೆಗಳಿಗೆ  ಸ್ಪಂದಿಸುವ  ಲೇಖನಿಯೇ ..
 ನಿನಗೆ  ನಾ  ಚಿರ ಋಣಿ ..

-- 
                                                                               -- \/эйждт





ಏಕಾಂಗಿ
 
ದುಖ ದುಮ್ಮಾನಗಳ ವಿಷಯದಿ ಏಕಾಂಗಿ ನಾ
ಅಂದರೆ ನನಗಾರು ಇಲ್ಲವೆಂದಲ್ಲ
ಬದಲಾಗಿ ನಾ ಬಯಸಿ ಅಪ್ಪಿಕೊಂಡದ್ದು
ದುಖವ ತೋಡಿಕೊಳ್ಳುವ ಪರಿ ತಿಳಿಯದೆನಗೆ 
ಏಕೋ ಏನೋ  ಅದು  ದಹಿಸುವ ಪರಿಗೆ
ನನ್ನನು ನಾನು ಅರ್ಪಿಸಿಹೆನು, ಸೋತಿಹೆನು
ಆ ನೋವಲೊಂದು ಮಜವ ಕಂಡಿಹೆನು
ಅದರಲೇ ಬಾಳುವುದು ರೂಢಿಯಾಗಿದೆ
ಸರಿಯೋ ತಪ್ಪೋ ತಿಳಿಯದಾಗಿದೆ

                                                                                   -- \/эйждт



Saturday, April 17, 2010

             ಅವಳು ..
ಅವಳೆಂದರೆ ನನಗೆ  ಎಲ್ಲಿಲ್ಲದ  ಪ್ರೀತಿ
ಏನು ಕೇಳಿದರೂ ಕೊಟ್ಟು ಬಿಡುವೆನೆಂಬ ನೀತಿ
ಅವಳೆಂದರೆ ನನ್ನ   ಪ್ರಾಣ ,ಬಾಳಿಗೊಂದು  ಅರ್ಥ  
ಅವಳಿಲ್ಲದೆ  ನನ್ನ   ಬಾಳು   ವ್ಯರ್ಥ
  
      ಅವಳಿಗೂ ಅಷ್ಟೇ ನಾನೆಂದರೆ  ಚಿನ್ನ
      ನಾನೆದುರಿದ್ದರೆ   ಮರೆತು ಬಿಡುವಳು ಸಮಯವನ್ನ
      ನನಗೇನಾದರೂ ಆದರೆ ಪ್ರಾಣ ಹೋದಂತೆ ಆಡುವಳು ನೋಡಿ
      ಯಾಕೆಂದರೆ ನಾನೇ ಅವಳ ಕರುಳ ಕುಡಿ .
 
 
        ನೆನಪಿಗಾಗಿ
ಮನದನ್ನೆ ಮತ್ತೆ ನೆನಪಾಗಿ ಕಾಡಿ
ಮನದಾಳದ ನೋವು ಮಾತಾಗಿ
ಮಾತು ಬರಿದಾಗಿ, ಮೌನಿಯಾಗಿ
ಮೌನಕೆ ಅಶ್ರುಧಾರೆ ಸಾಥಿಯಾಗಿ
ಆ ಅಶ್ರುವೆ ಲೇಖನಿಗೆ ಶಾಯಿಯಾಗಿ
ಬರೆದಿರುವೆ ನಾ ಮರೆಯಲಾರದ ನೆನಪಿಗಾಗಿ

Friday, February 19, 2010

                                     ಆ ದಿನಗಳು.....

ಅವನೊಬ್ಬ ಬಾಳ ಪಯಣದ ದಾರಿಹೋಕ.ಬಾಳ ಹಾದಿಯಲ್ಲಿ  ನಡೆಯುವುದು ಅವನ ಕಾಯಕ. ಕೆಲವೊಮ್ಮೆ ಈ ಬಾಳ ಹಾದಿಯು ಕಲ್ಲು ಮುಳ್ಳುಗಳಿಂದ ಕೂಡಿದಾಗ ಇನ್ನೆಷ್ಟು ದಿನ ಈ ಪಯಣ? ಎಂದು ಚಿಂತಿಸುತ್ತಿದ್ದ.
ಉತ್ತರ ತಿಳಿಯದಾದಾಗ ,  ತನ್ನನ್ನು ತಾನು ಸಮಾಧಾನ ಮಾಡಿಕೊಂಡು ಸಾಗಿತ್ತು ಅವನ ಜೀವನ ಯಾತ್ರೆ. ಹೀಗೆ ಸಾಗುತ್ತಿರುವಾಗ ಕಂಡು ಬಂತು ಒಂದು ಸುಂದರ ದೃಶ್ಯ!, ಅಲ್ಲಿ ಕೃತ್ರಿಮತೆ ಇರಲಿಲ್ಲ,   ನಗೆಯಿತ್ತು, ಜಗಳ, ಹುಸಿಗೋಪಗಳಿದ್ದವು. ಆದರೆ ಅದರ ಹಿಂದೆ ದ್ವೇಷದ ಕರಿಛಾಯೆಯಿರಲಿಲ್ಲ. ಅಲ್ಲಿ ಪ್ರಕೃತಿ ನೆಲೆಸಿತ್ತು.ಎಲ್ಲದಕ್ಕೂ ಹೆಚ್ಚಾಗಿ ಕ್ಷಣ ಕ್ಷಣಕ್ಕೂ ವಿಸ್ಮಿತಗೊಳ್ಳುವ  ಮುಗ್ಧ  ಮನಸ್ಸಿತ್ತು. ನೋಡುತ್ತಾ ನಿಂತ ಅವನ ಮನಸ್ಸು ಆನಂದದಿಂದ ಕುಣಿದಾಡುತ್ತಿತ್ತು . ನೋಡುತ್ತಾ ನಿಂತವ ತನ್ನ ಬಾಳ ಆ ಆದಿಯೆಡೆಗೆ  ಹಿಂತಿರುಗಿ ನೋಡಿದ. ಆಗಲೇ ಅಲ್ಲಿಂದ  ದೂರ, ಹಿಂತಿರುಗಲಾರದಷ್ಟು ದೂರ ಬಂದಿದ್ದ.ಅದು ಇನ್ನು ಕೇವಲ ಸುಮಧುರ ನೆನಪುಗಳ ಕಂತೆ ಮಾತ್ರವೆಂದು ಆತನಿಗೆ ತಿಳಿದಿತ್ತು. ಆ ನೆನಪಿನಲ್ಲಿ ಮಿಂದೆದ್ದು ಬಂದಾಗಲೆಲ್ಲ ಅವನಿಗೆ ಏನೋ ಹರುಷ, ಹೊಸ ಉತ್ಸಾಹ.ಹೀಗೆ ನವ ಚೈತನ್ಯವ ತುಂಬಿಕೊಳ್ಳುತ್ತಾ ಸಾಗಿತ್ತು ಅವನ ಪಯಣ. ಅಲ್ಲವೇ ಮಧುರ ಆದಿನಗಳು!!!.
ಒಮ್ಮೆ ಯೋಚಿಸಿದರೆ ಇದು ನಮ್ಮೆಲ್ಲರ ಕಥೆಯೂ ಹೌದಲ್ಲವೇ? ......
 
 
                                         .